RECRUITMENT | ಹಾಸನ ಜಿಲ್ಲಾ ಆಯುಷ್‌ ಅಧಿಕಾರಿಗಳ ಕಛೇರಿಯಲ್ಲಿ 18 ಹುದ್ದೆಗಳಿಗೆ ಅರ್ಜಿ ಆಹ್ವಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಜಿಲ್ಲಾ ಆಯುಷ್‌ ಅಧಿಕಾರಿಗಳ ಕಛೇರಿ, ಹಾಸನದಲ್ಲಿ 18 ತಜ್ಞ ವೈದ್ಯರು, ಔಷಧಿ ವಿತರಕರು, ಮಸಾಜಿಸ್ಟ್‌, ಕ್ಷಾರಸೂತ್ರ ಅಟೆಂಡೆಂಟ್‌, ಸ್ತ್ರೀ ರೋಗ ಅಟೆಂಡೆಂಟ್‌, ಮಲ್ಟಿಪರ್ಪಸ್‌ ವರ್ಕರ್‌ ಮತ್ತು ಸಮುದಾಯ ಆರೋಗ್ಯ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

10ನೇ ತರಗತಿ, 7ನೇ ತರಗತಿ, ಡಿಪ್ಲೋಮಾ, ಬಿಎಎಂಎಸ್‌, ಎಂ.ಡಿ, ಎಂ.ಎಸ್‌, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಜೊತೆಗೆ ಏಪ್ರಿಲ್‌ 19,2023ರ ಅನ್ವಯ ಕನಿಷ್ಟ 18 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗ ತಿಂಗಳಿಗೆ 10,300/- ರಿಂದ 35,000/-ರೂಗಳ ವರೆಗೆ ವೇತನವನ್ನು ನೀಡಲಾಗುವುದು.

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಹ ಅಭ್ಯರ್ಥಿಗಳು ಆಫ್‌ಲೈನ್‌ ಮೂಲಕ ಏಪ್ರಿಲ್‌ 19,2023ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!