Friday, July 1, 2022

Latest Posts

ಸ್ಪರ್ಮ್ ಡೋನರ್ ಆಯ್ತು, ಇದೀಗ ಡಾಕ್ಟರ್ ಪಾತ್ರದಲ್ಲಿ ಕಾಣಿಸಲಿದ್ದಾರೆ ಆಯುಷ್ಮಾನ್ ಖುರಾನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ವಿಕ್ಕಿ ಡೋನರ್ ಮೂಲಕ ಬಾಲಿವುಡ್‌ನಲ್ಲಿ ತನ್ನ ಜಾಗ ಗಟ್ಟಿಮಾಡಿಕೊಂಡಿರುವ ನಟ ಆಯುಷ್ಮಾನ್ ಖುರಾನ ಇದೀಗ ‘ಡಾಕ್ಟರ್‌ಜೀ’ ಮೂಲಕ ಅಭಿಮಾನಿಗಳನ್ನು ರಂಜಿಸಲಿದ್ದಾರೆ.
ಡಾಕ್ಟರ್ ಜೀ ಸಿನಿಮಾ ಶೂಟಿಂಗ್ ಆರಂಭವಾಗಿದ್ದು, ಆಯುಷ್ಮಾನ್ ತಮ್ಮ ಫಸ್ಟ್ ಲುಕ್ ಇನ್ಸ್‌ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಳಿ ಕೋಟು ತೊಟ್ಟು, ಕನ್ನಡಕ ಹಾಕಿ, ಕೈಯಲ್ಲಿ ಪುಸ್ತಕ ಇಟ್ಟುಕೊಂಡು ಆಯುಷ್ಮಾನ್ ಶೂಟಿಂಗ್‌ಗೆ ಹೊರಟಿದ್ದಾರೆ. ಡಾಕ್ಟರ್‌ಜೀ ತಯಾರಾಗಿಯೇ ಹೊರಟಿದ್ದಾರೆ. ಈಗ ಶುರುವಾಗತ್ತೆ ನೋಡಿ ಶೂಟಿಂಗ್ ಎಂದು ಕ್ಯಾಪ್ಷನ್ ಹಾಕಿದ್ದಾರೆ. ವಿಭಿನ್ನ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುವ ಆಯುಷ್ಮಾನ್ ಖುರಾನಾ ಡಾಕ್ಟರ್ ಪಾತ್ರದಲ್ಲಿ ಹೇಗೆ ಕಾಣ್ತಾರೆ ನೋಡಬೇಕಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss