ಶಬರಿಮಲೆ ಯಾತ್ರಾರ್ಥಿಗಳಿಗಾಗಿ ‘ಅಯ್ಯನ್​’ App !

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಕೇರಳ ಅರಣ್ಯ ಇಲಾಖೆಯು ‘ಅಯ್ಯನ್​’ ಎಂಬ ಹೊಸ ಆಯಪ್ ಅಭಿವೃದ್ಧಿ ಪಡಿಸಿದೆ.
ಈ ಹೊಸ ಅಪ್ಲಿಕೇಶನ್ ಶಬರಿಮಲೆ ಯಾತ್ರಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದೆ. ಮಲಯಾಳಂ, ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲ ನಾಲ್ಕು ಭಾಷೆಗಳು ಹಾಗೂ ಹಿಂದಿಯಲ್ಲಿ ಮಾರ್ಗಸೂಚಿಗಳು ಮತ್ತು ಮಾಹಿತಿಯನ್ನು ನೀಡಲಿದೆ.

ಕೇರಳ ಅರಣ್ಯ ಇಲಾಖೆಯ ಹೊಸ ಆಯಪ್ ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಮೀಸಲಾಗಿ ಕಾರ್ಯನಿರ್ವಹಿಸುತ್ತದೆ. ಶಬರಿಮಲೆಗೆ ಬರುವ ಯಾತ್ರಿಕರು ಮುಂಬರುವ ಮಂಡಲ ಪೂಜೆ ಹಾಗೂ ಮಕರವಿಳಕ್ಕು ಪೂಜೆ ಋತುವಿನಲ್ಲಿ ಬಳಸಬಹುದು.

ಪಂಪಾ – ಸನ್ನಿಧಾನಂ – ಸ್ವಾಮಿ ಅಯ್ಯಪ್ಪ ರಸ್ತೆ, ಪಂಪಾ – ನಿಲಿಮಲ – ಸನ್ನಿಧಾನಂ, ಎರುಮೇಲಿ – ಅಝುಟಕಡವ್ – ಪಂಂಬಾ, ಸತ್ರಂ – ಉಪ್ಪುಪಾರ – ಸನ್ನಿಧಾನಂ ಮಾರ್ಗಗಳಲ್ಲಿ ಲಭ್ಯವಿರುವ ಸೇವೆಗಳ ಕುರಿತು ಈ ಆಯಪ್ ಮೂಲಕ ತಿಳಿಯಬಹುದಾಗಿದೆ.

ಜೊತೆಗೆ ಸೇವಾ ಕೇಂದ್ರಗಳು, ವೈದ್ಯಕೀಯ ತುರ್ತು ಚಿಕಿತ್ಸಾ ಘಟಕ, ವಸತಿ, ಆನೆಗಳ ಬಗ್ಗೆ ಮಾಹಿತಿಯನ್ನೂ ಆಯಪ್ ಒಳಗೊಂಡಿದೆ. ಸ್ಕ್ವಾಡ್ ತಂಡ, ಸಾರ್ವಜನಿಕ ಶೌಚಾಲಯಗಳು, ಪ್ರತಿ ಬೇಸ್‌ನಿಂದ ಸನ್ನಿಧಾನಂವರೆಗಿನ ಅಂತರ, ಅಗ್ನಿಶಾಮಕ ದಳ, ಪೊಲೀಸ್ ಸಹಾಯ ಪೋಸ್ಟ್, ಇಕೋ ಶಾಪ್, ಉಚಿತ ಕುಡಿಯುವ ನೀರಿನ ವಿತರಣಾ ಕೇಂದ್ರಗಳು ಮತ್ತು ಸಾಂಪ್ರದಾಯಿಕ ಟ್ರೆಕ್ಕಿಂಗ್ ಮಾರ್ಗಗಳಲ್ಲಿ ಒಂದು ಸ್ಥಳದಿಂದ ಮುಂದಿನ ಕೇಂದ್ರಗಳಿಗೆ ದೂರ, ಶಬರಿಮಲೆ ಯಾತ್ರೆಯ ಸಂದರ್ಭದಲ್ಲಿ ಅನುಸರಿಸಬೇಕಾದ ಆಚರಣೆಗಳು ಮತ್ತು ಸಾಮಾನ್ಯ ಮಾರ್ಗಸೂಚಿಗಳನ್ನು ಸಹ ಹೊಸ ಆಯಪ್‌ನಲ್ಲಿ ವಿವರಿಸಲಾಗಿದೆ.

ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಆಯಪ್​ ಲಭ್ಯ
ಯಾತ್ರಾರ್ಥಿಗಳಿಗೆ ಪೆರಿಯಾರ್ ವನ್ಯಜೀವಿ ಅಭಯಾರಣ್ಯದ ಜೈವಿಕ ವೈವಿಧ್ಯತೆ ಮತ್ತು ಶ್ರೀಮಂತಿಕೆಯ ಒಳನೋಟವನ್ನೂ ವಿವರಿಸುತ್ತದೆ. ಶಬರಿಮಲೆ ದೇವಸ್ಥಾನದ ಬಗ್ಗೆ ಎಲ್ಲ ಪೂಜೆ ಮತ್ತು ಕೊಡುಗೆ ವಿವರಗಳು ಮತ್ತು ಇತರ ಮಾಹಿತಿ ಸಹ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಈ ‘ಅಯ್ಯನ್’ ಅಪ್ಲಿಕೇಶನ್​ಅನ್ನು ಗೂಗಲ್​ ಪ್ಲೇ ಸ್ಟೋರ್​ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಯಾವುದೇ ಸ್ಮಾರ್ಟ್‌ಫೋನ್‌ನಲ್ಲೂ ಇದು ಕಾರ್ಯನಿರ್ವಹಿಸುತ್ತದೆ.

‘ಅಯ್ಯನ್​’ ಆಯಪ್ ಮಲಯಾಳಂ ಮತ್ತು ಕನ್ನಡ ಸೇರಿ ದಕ್ಷಿಣ ಭಾರತದ ಎಲ್ಲ ನಾಲ್ಕು ಭಾಷೆಗಳಲ್ಲೂ ಮಾಹಿತಿ ನೀಡುತ್ತದೆ. ತಮಿಳು, ತೆಲುಗು ಜೊತೆಗೆ ಹಿಂದಿಯಲ್ಲೂ ಮಾಹಿತಿ ಸಿಗಲಿದೆ. ಶಬರಿಮಲೆಯ ನೈಸರ್ಗಿಕ ಚಾರಣ ಮಾರ್ಗಗಳ ಎಲ್ಲ ಗೇಟ್‌ಗಳಲ್ಲಿ ಅಪ್ಲಿಕೇಶನ್‌ನ ಕ್ಯೂಆರ್ ಕೋಡ್ ಪ್ರದರ್ಶಿಸಲಾಗುತ್ತದೆ. ಯಾತ್ರಿಕರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಯೂ ಅಪ್ಲಿಕೇಶನ್ ಡೌನ್‌ಲೋಡ್ ಮಾಡಬಹುದು. ಇದು ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ತುರ್ತು ಸಹಾಯವಾಣಿ ಸಂಖ್ಯೆಗಳನ್ನೂ ಸಹ ಒಳಗೊಂಡಿದೆ.

ಈ ಆಯಪ್‌ನ ವಿಶೇಷತೆಯೆಂದರೆ ಒಬ್ಬರು ಅದನ್ನು ಆನ್‌ಲೈನ್ ಮತ್ತು ಆಫ್‌ಲೈನ್ ಮೋಡ್‌ಗಳಲ್ಲೂ ಬಳಕೆ ಮಾಡಬಹುದು. ಆಯ್ದ ಮಾರ್ಗಗಳಲ್ಲಿ ವಿವಿಧ ಎಚ್ಚರಿಕೆಗಳನ್ನು ಅಪ್ಲಿಕೇಶನ್ ಮೂಲಕ ಸ್ವೀಕರಿಸಬಹುದು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!