ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಭಾರತ, ಬ್ರಿಟನ್ ನಲ್ಲಿ ಪತ್ತೆಯಾಗಿರುವ B.1.617 ಹಾಗೂ B.1.1.7 ಕೊರೋನಾ ರೂಪಾಂತರಿ ತಳಿಗಳ ವಿರುದ್ಧ ಹೋರಾಟಕ್ಕೆ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಭಾರತ್ ಬಯೋಟೆಕ್ ಸಂಸ್ಥೆ ತಿಳಿಸಿದೆ.
ಕೋವ್ಯಾಕ್ಸಿನ್ ಲಸಿಕೆಯಲ್ಲಿ ಬಳಕೆ ಮಾಡಲಾಗಿರುವ ರೂಪಾಂತರಿ (ಡಿ614ಜಿ) ಗೆ ಹೋಲಿಕೆ ಮಾಡಿದರೆ B.1.617 ರೂಪಾಂತರಿ ವೈರಾಣು ನಿಷ್ಪರಿಣಾಗೊಳಿಸುವಿಕೆಯಲ್ಲಿ ಲಸಿಕೆಯಲ್ಲಿ 1.95 ಅಂಶದಷ್ಟು ಕಡಿತ ದಾಖಲಾಗಿದ್ದರೆ, ಮೊದಲ ಬಾರಿಗೆ ಬ್ರಿಟನ್ ನಲ್ಲಿ ದಾಖಲಾಗಿರುವ B.1.1.7 ಹಾಗೂ ಲಸಿಕೆಯಲ್ಲಿರುವ ರೂಪಾಂತರಿ (D614G) ವೈರಾಣು ನಿಷ್ಕ್ರಿಯಗೊಳಿಸುವುದರಲ್ಲಿ ಯಾವುದೇ ಮಹತ್ವದ ನಕಾರಾತ್ಮಕ ಅಂಶಗಳೂ ಕಂಡುಬಂದಿಲ್ಲ ಎಂದು ಭಾರತ್ ಬಯೋಟೆಕ್ ಹೇಳಿದೆ.
ಇನ್ನ್ನು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ-ಐಸಿಎಂಆರ್ ಸಹಯೋಗದಲ್ಲಿ ನಡೆದ ಅಧ್ಯಯನದಲ್ಲಿ ಈ ಅಂಶ ಕಂಡುಬಂದಿದೆ.