ದಿಗಂತ ವರದಿ ವಿಜಯಪುರ:
ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಮಾಜಿ ಶಾಸಕ ಚಿಮ್ಮನಕಟ್ಟಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನದ ಹೇಳಿಕೆ ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸ್ವಕ್ಷೇತ್ರದಲ್ಲಿ ಗೆಲ್ಲುವ ಯೋಗ್ಯತೆ ಇಲ್ಲಂದ್ರ ಬಾದಾಮಿಯಲ್ಲೇಕೆ ಸ್ಪರ್ಧಿಸಬೇಕು ಎಂದು ಬಿ.ಬಿ. ಚಿಮ್ಮನಕಟ್ಟಿ ಅಸಮಾಧಾನ ವ್ಯಕ್ತಪಡಿಸಿರುವ ಕುರಿತು ನಗರದಲ್ಲಿ ಅವರು ಪ್ರತಿಕ್ರಿಯಿಸಿ, ಚಿಮ್ಮನಕಟ್ಟಿಗೆ ವಯಸ್ಸಾಗಿದೆ ಹೀಗಾಗಿ ಮಾತಾಡ್ತಾರೆ, ಆ ಭಾಗದ ಹಿರಿಯರು ಅಂತಾ ಸಿದ್ದರಾಮಯ್ಯನವರೇ ಮಾತನಾಡಲು ಅವರಿಗೆ ಅವಕಾಶ ಕೊಟ್ಟಿದ್ದರು. ಚಿಮ್ಮನಕಟ್ಟಿಗೆ ಏನ್ ಮಾತನಾಡಬೇಕು ಅಂತಾ ಅರ್ಥವಾಗೊಲ್ಲ. ನಮಗು, ನಿಮಗು ವಯಸ್ಸಾದರೇ ಹೀಗೆ ಆಗುತ್ತೆ ಎಂದರು.
ಜಿಪಂ, ತಾಪಂ ಚುನಾವಣೆ ನಡೆಯಬೇಕಿತ್ತು, ಆದರೆ ಸೋಲಿನ ಭಯದಿಂದ ನೆಪವೊಡ್ಡಿ ಚುನಾವಣೆಯನ್ನು ಸರ್ಕಾರ ಮುಂದೂಡಿದೆ ಎಂದು ಆರೋಪಿಸಿದರು.