ಆಂಬುಲೆನ್ಸ್‌ನಲ್ಲಿಯೇ ಮಗು ಜನನ, ಶುಶ್ರೂಶಕರಿಗೆ ಅಭಿನಂದನೆ!

ಹೊಸದಿಗಂತ ವರದಿ ಕನಕಗಿರಿ:

ತಾಲೂಕಿನ ಚಿಕ್ಕಿಡ್ ಗ್ರಾಮದ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು, ನವಿಲಿ ಸಮುದಾಯ ಆರೋಗ್ಯ ಕೇಂದ್ರದ 108 ಆಂಬುಲೆನ್ಸ್ ಕರೆದೊಯಲು ಬಂದಿದ್ದ ಆರೋಗ್ಯಕವಚ 108 ವಾಹನದಲ್ಲಿಯೇ ಹೆರಿಗೆಯಾದ ಘಟನೆ ಇಂದು ನಡೆದಿದೆ.

ಕನಕಗಿರಿ ತಾಲೂಕಿನ ಚಿಕ್ಕಿಡ್ ಗ್ರಾಮದ ಶಬನಾ ಹೊನ್ನೂರುಸಬ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ, ಹಿನ್ನೆಲೆಯಲ್ಲಿ ಕುಟುಂಬಸ್ಥರು 108 ಆಂಬುಲೆನ್ಸ್ ಗೆ ಕರೆ ಮಾಡಿದ್ದರು. ನವಿಲಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಕವಚ 108 ಆಂಬುಲೆನ್ಸ್ ಚಿಕ್ಕಿಡ್ ಗ್ರಾಮಕ್ಕೆ ತೆರಳಿ ಹೆರಿಗೆ ನೋವಿನಿಂದ ಬಳಲುತ್ತಿದ ಮಹಿಳೆಯನ್ನು ಆಂಬುಲೆನ್ಸ್ ಮೂಲಕ ಕನಕಗಿರಿ ತಾಲೂಕು ಆಸ್ಪತ್ರೆಗೆ ಕರೆದುಕೊಂಡು ಬರುವಾಗ, ಹೆರಿಗೆ ನೋವು ಹೆಚ್ಚಾಗಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಶ್ರೂಷಕ ಧರ್ಮೇಂದ್ರ ಮರಕುಂಬಿ ಅವರು ಮಾರ್ಗ ಮಧ್ಯ ಆಂಬುಲೆನ್ಸ್ ನಲ್ಲಿ ಮಹಿಳೆಗೆ ಸುರಕ್ಷಿತ ಹೆರಿಗೆ ಮಾಡಿಸಿ, ನಂತರ ತಾಯಿ ಮಗುವನ್ನು ಕನಕಗಿರಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. 108 ಆಂಬುಲೆನ್ಸ್ ವಾಹನದ ಸಿಬ್ಬಂದಿಗಳಿಗೆ ಕುಟುಂಬಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!