ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ತಮಾಷೆಯ ದೃಶ್ಯಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತದೆ. ಹಾಗೆಯೇ ಕೆಲವೊಂದು ಭಾವುಕ ದೃಶ್ಯಗಳು ಕಣ್ಣಂಚಲ್ಲಿ ನೀರು ಬರುವಂತೆ ಮಾಡುತ್ತವೆ. ಇದೀಗ ನಿಮ್ಮನ್ನು ಭಾವುಕರನ್ನಾಗಿಸುವಹ ಅಂತಹದೇ ದೃಶ್ಯವೊಂದು ವೈರಲ್ ಆಗಿದೆ.
ಇದು ಪುಟಾಣಿ ಮಗುವೊಂದು ತನ್ನ ಪ್ರೀತಿಯ ಅಜ್ಜನಿಗೆ ತಿನಿಸೊಂದನ್ನು ತಿನ್ನಿಸುತ್ತಿರುವ ದೃಶ್ಯ. ಆ ಮಗು ತನ್ನ ಅಜ್ಜನಿಗೆ ತೋರುವ ಪ್ರೀತಿ ನೋಡಿದರೆ ಖಂಡಿತವಾಗಿಯೂ ಕಣ್ಣೀರು ಬರುತ್ತದೆ.
ವಿಡಿಯೋದಲ್ಲಿಏನಿದೆ?
ಹಾಸಿಗೆಯಲ್ಲಿ ಮಲಗಿರುವ ಅಜ್ಜ ಮತ್ತು ಅವರ ಪಕ್ಕದಲ್ಲಿ ಕುಳಿತಿರುವ ಪುಟಾಣಿ ಮೊಮ್ಮಗಳ ದೃಶ್ಯದಿಂದ ವಿಡಿಯೋ ಆರಂಭವಾಗುತ್ತದೆ. ಪುಟಾಣಿ ಮಲಗಿರುವ ಅಜ್ಜನಿಗೆ ಪ್ಯಾಕೇಟ್ನಿಂದ ತಿನಿಸನ್ನು ತನ್ನ ಕೈಯಲ್ಲಿ ಹಿಡಿದು ತಿನಿಸುತ್ತಾಳೆ. ಹೀಗೆ ತಿನಿಸುವಾಗ ಅದರ ಬಿಸಿ ಆರಿಸುವಂತೆ ಮುಗ್ಧವಾಗಿ ಊದುತ್ತಾಳೆ. ಈ ಪುಟಾಣಿಯ ಮುಗ್ಧತೆ ನೆಟ್ಟಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. anna._.can ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಆಗಿರುವ ದೃಶ್ಯ ಇದು.
https://www.instagram.com/tv/CWfybK9gYe1/?utm_source=ig_web_copy_link