19 ಇಂಚು ಉದ್ದದ ಕಿವಿಗಳೊಂದಿಗೆ ಮೇಕೆ ಮರಿ ಜನನ, ಸೆಲೆಬ್ರೆಟಿಯಾದ ಸಿಂಬಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಸ್ತುತ ಲೋಕಲ್‌ ಸೆಲೆಬ್ರಟಿಯಾಗಿ ಸಿಂಬಾ ಮಿಂಚುತ್ತಿದೆ. ಜೂನ್‌ 5ರಂದು 19 ಇಂಚು ಉದ್ದದ ಕಿವಿಗಳೊಂದಿಗೆ ಮೇಕೆ ಮರಿಯೊಂದು ಪಾಕಿಸ್ತಾದಲ್ಲಿ ಜನಿಸಿದೆ. ನ್ಯೂಬಿಯನ್ ತಳಿಗೆ ಸೇರಿದ ಈ ಆಡುಗಳಿಗೆ ಸಾಮಾನ್ಯವಾಗಿ ಉದ್ದವಾದ ಕಿವಿಗಳನ್ನು ಹೊಂದಿರುತ್ತವೆ. ಬಿಸಿ ವಾತಾವರಣದಲ್ಲಿಯೂ ತಂಪಾಗಿರಿಸುವ ವಿಶಿಷ್ಟತೆಯನ್ನು ಹೊಂದಿರುತ್ತವೆ.

ಸಿಂಬಾ ಕಿವಿ ಸಾಮಾನ್ಯವಾಗಿ ಇರುವ ಗಾತ್ರಕ್ಕಿಂತ ಉದ್ದವಾಗಿವೆ, ಹಾಗಾಇ ಗಿನ್ನೆಸ್ ವಿಶ್ವ ದಾಖಲೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಮಾಲೀಕ ಮೊಹಮ್ಮದ್ ಹಸನ್ ನರೆಜೊ ತಿಳಿಸಿದ್ದಾರೆ. ಜೆನಿಟಿಕ್‌ ಡಿಸಾರ್ಡರ್‌ನಿಂದಾಗಿ ಇಂತಹ ಘಟನೆ ಸಂಭವಿಸುತ್ತದೆ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ. ಇದು ಪಾಕಿಸ್ತಾನದಲ್ಲಿ ಕಂಡುಬರುವ ಅತ್ಯಂತ ಸಾಮಾನ್ಯ ತಳಿಯಾಗಿದೆ.

ಮೇಕೆ ಸಾಕಾಣಿಕೆಯಲ್ಲಿ ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ. ಕೆಲವರು ಮಾಂಸಕ್ಕಾಗಿ ಬೆಳೆಸಿದರೆ, ಇನ್ನು ಕೆಲವರು ಹಾಲು ಮತ್ತು ಮಾಂಸ ಎರಡಕ್ಕೂ ಬೆಳೆಸುತ್ತಾರೆ. ನ್ಯೂಬಿಯನ್ ಮೇಕೆ ಹಾಲಿನ ಗುಣಮಟ್ಟ ಉತ್ತಮವಾಗಿದ್ದು, ವಿವಿಧ ಡೈರಿ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!