ಬೇಬಿ ಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಆವರಣದಲ್ಲಿ ಚಿರತೆ ಪ್ರತ್ಯಕ್ಷ-ಆತಂಕ

ಹೊಸದಿಗಂತ ವರದಿ, ಪಾಂಡವಪುರ:

ತಾಲೂಕಿನ ಬೇಬಿ ಬೆಟ್ಟದ ಶ್ರೀ ರಾಮಯೋಗೀಶ್ವರ ಮಠದ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿ ಸ್ಥಳಿಯರಲ್ಲಿ ಆತಂಕ ಮೂಡಿಸಿದೆ.
ಬುಧವಾರ ಬೆಳಗಿನಜಾವ 2.30ರ ಸಮಯದಲ್ಲಿ ಮಠದ ಆವರಣ ಪ್ರವೇಶಿಸಿರುವ ಚಿರತೆಯ ಚಲನ ವಲನಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮಠದ ಆವರಣವನ್ನು ಕೆಲ ನಿಮಿಷಗಳ ಕಾಲ ಸುತ್ತಾಡಿರುವ ಚಿರತೆ ಬಳಿಕ ನಾಯಿಯೊಂದರ ಮೇಲೆ ದಾಳಿ ನಡೆಸಿ ಕೊಂದು ತಿಂದಿದೆ. ವಿಚಾರ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯ ಚಲನ ವಲನ ಆಧರಿಸಿ ಜೀವಂತ ನಾಯಿಯನ್ನು ಬೋನಿನಲ್ಲಿರಿಸಿ ಸೆರೆ ಹಿಡಿಯಿಲು ಕ್ರಮ ಕೈಗೊಂಡಿದ್ದಾರೆ.

ಕರು ಮೇಲೆ ದಾಳಿ ನಡೆದಿತ್ತು
ಬೇಬಿ ಬೆಟ್ಟ ಸುತ್ತಲಿನ ಪ್ರದೇಶದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದೆ. ಈ ಹಿಂದೆಯೂ ಚಿರತೆ ಕರು ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಮಠದಲ್ಲಿ 15ಕ್ಕೂ ಹೆಚ್ಚು ಹಸುಗಳಿದ್ದು, ಅವುಗಳು ಮೇಯಿಸಲು ಹೊರ ಕಳುಹಿಸಲು ಭಯವಾಗುತ್ತದೆ. ಪ್ರಾಣಿಗಳು ಮನುಷ್ಯನ ಮೇಲೆ ಯಾವ ಸಂದರ್ಭದಲ್ಲಿ ದಾಳಿ ನಡೆಸುತ್ತವೆ ಎಂಬುದು ತಿಳಿಯಲು ಸಾಧ್ಯವಿಲ್ಲ. ನಾವು ಕೂಡ ಭಕ್ತಾಧಿಗಳ ಮನೆಗಳಲ್ಲಿ ಪೂಜೆ ಸೇರಿದಂತೆ ಇತರೆ ಧಾರ್ಮಿಕ ಕೈಂಕರ್ಯಗಳಿಗೆ ಹೊರ ಜಿಲ್ಲೆ, ತಾಲೂಕುಗಳಿಗೆ ತೆರಳಿ ತಡ ರಾತ್ರಿ ಮಠಕ್ಕೆ ಆಗಮಿಸುತ್ತೇವೆ. ಹೀಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆ ಸೆರೆಹಿಡಿಯಲು ಹೆಚ್ಚಿನ ರೀತಿಯಲ್ಲಿ ಗಮನ ಹರಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೆಚ್ಚಿನ ಅನಾಹುತಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀ ಆಗ್ರಹಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!