ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, May 7, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊಡಗಿನಲ್ಲಿ ಮತ್ತೆ ಆಲಿಕಲ್ಲು ಮಳೆ: ವಿವಿಧ ಬೆಳೆಗಳಿಗೆ ಹಾನಿ

ಹೊಸ ದಿಗಂತ ವರದಿ, ಮಡಿಕೇರಿ:

ಕೊಡಗಿನ ವಿವಿಧೆಡೆ ಶುಕ್ರವಾರ ಸಂಜೆ ಹಾಗೂ ರಾತ್ರಿ ಮಳೆಯಾಗಿದ್ದು, ದಕ್ಷಿಣ ಕೊಡಗಿನಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದ ಪರಿಣಾಮ ಕೃಷಿಕ ವರ್ಗ ಕೊಂಚ ಆತಂಕಗೊಂಡಿದೆ.
ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ, ನೆಮ್ಮಲೆ ಸೇರಿದಂತೆ ಸುತ್ತಮುತ್ತಲ ಗ್ರಾಮ ಹಾಗೂ ವೀರಾಜಪೇಟೆ, ಮೂರ್ನಾಡು ಭಾಗದಲ್ಲೂ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ಇತ್ತೀಚೆಗೆ ಕೊಡ್ಲಿಪೇಟೆಯಲ್ಲಿ ಸುರಿದ ಮಾದರಿಯಲ್ಲೇ ಆಲಿಕಲ್ಲುಗಳು ರಾಶಿ ರಾಶಿಯಾಗಿ ಬಿದ್ದ ದೃಶ್ಯ ಕಂಡು ಬಂದಿತು. ಕೆಲವು ಬೆಳೆಗಳಿಗೆ ಆಲಿಕಲ್ಲಿನಿಂದ ಹಾನಿಯಾಗಿದ್ದು, ಕೃಷಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಮಡಿಕೇರಿ ತಾಲೂಕಿನಲ್ಲೂ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ನಗರದಲ್ಲಿ ಸಾಧಾರಣ ಮಳೆ ಸುರಿಯಿತು.

ಕುಂಬಾರಗಡಿಗೆಯಲ್ಲಿ ಭಾರೀ ಗಾಳಿ-ಮಳೆ 
ಜಿಲ್ಲೆಯ ಕೆಲವೆಡೆ ಉತ್ತಮ ಮಳೆಯಾಗುತ್ತಿದೆ. ಶುಕ್ರವಾರ ರಾತ್ರಿ ಉತ್ತರ ಕೊಡಗಿನ ಕುಂಬಾರಗಡಿಗೆ ಗ್ರಾಮದಲ್ಲಿ ಭಾರೀ ಗಾಳಿ ಮಳೆಯಾಗಿದ್ದು, ಒಂದು ಮನೆ ಬೀಳುವ ಹಂತಕ್ಕೆ ತಲುಪಿದೆ.
ಹಾನಿಗೀಡಾದ ಮನೆ ಕನ್ನಿಗಂಡ ಬಿ.ನೀಲಮ್ಮ ಎಂಬವರಿಗೆ ಸೇರಿದ್ದಾಗಿದ್ದು, ಅಧಿಕಾರಿಗಳು ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಗುಡುಗು, ಸಿಡಿಲು ಸಹಿತ ಗಾಳಿ ಮಳೆಯಾಗುತ್ತಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುುಂದಾಗಬೇಕಿದೆ.

ಸೋಮವಾರಪೇಟೆಯಲ್ಲಿ ಸಿಡಿಲಿನ ಆರ್ಭಟ
ಸೋಮವಾರಪೇಟೆಯಲ್ಲಿ ಸಿಡಿಲಿನ ಆರ್ಭಟ ಭಯಾನಕ ಅನುಭವ ನೀಡಿತು. ಎದೆ ನಡುಗಿಸುವ ಶಬ್ಧದೊಂದಿಗೆ ಪಟ್ಟಣದ ಕೋರ್ಟ್ ಬಳಿಯ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಮರ ಹೊತ್ತಿ ಉರಿಯಿತು. ಅದೃಷ್ಟವಶಾತ್ ಯಾವುದೇ ಸಾವು, ನೋವುಗಳು ಸಂಭವಿಸಿಲ್ಲ.
ಮಳೆ ವಿವರ : ಶನಿವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ 16.07 ಮಿ.ಮೀ., ವೀರಾಜಪೇಟೆ ತಾಲೂಕಿನಲ್ಲಿ 12.75 ಮಿ,ಮೀ., ಸೋಮವಾರಪೇಟೆ ತಾಲೂಕಿನಲ್ಲಿ 12 ಮಿ.ಮೀ. ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ 40.25 ಮಿ.ಮೀ. ಮಳೆಯಾಗಿದೆ.
ಹೋಬಳಿವಾರು ದಾಖಲಾಗಿರುವ ಮಳೆ ವಿವರದನ್ವಯ ಮಡಿಕೇರಿ ಕಸಬಾ 44.2, ಸಂಪಾಜೆ 1.6, ನಾಪೋಕ್ಲು 10, ಭಾಗಮಂಡಲ 11, ವೀರಾಜಪೇಟೆ ಕಸಬಾ 18.8, ಪೊನ್ನಂಪೇಟೆ 6.2, ಶ್ರೀಮಂಗಲ 7, ಅಮ್ಮತ್ತಿ 16, ಹುದಿಕೇರಿ 28.5, ಸೋಮವಾರಪೇಟೆ ಕಸಬಾ 6.4, ಶಾಂತಳ್ಳಿ 3, ಕೊಡ್ಲಿಪೇಟೆ 18.4, ಕುಶಾಲನಗರ 16.2, ಸುಂಟಿಕೊಪ್ಪ 28 ಮಿ.ಮೀ.ಮಳೆಯಾಗಿದೆ.
ಹಾರಂಗಿ ನೀರಿನ ಮಟ್ಟ: ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳಾಗಿದ್ದು, ಶನಿವಾರ ಜಲಾಶಯದಲ್ಲಿ 2820.37 ಅಡಿ ನೀರು ಸಂಗ್ರಹವಾಗಿತ್ತು. ಜಲಾಶಯಕ್ಕೆ 75 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ನದಿಗೆ 200 ಹಾಗೂ ನಾಲೆಗೆ 70 ಕ್ಯುಸೆಕ್ ಸೇರಿದಂತೆ 270 ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss