ಬೆದರಿಕೆಯ ಹಿನ್ನೆಲೆ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಪತ್ನಿ ಅಮೃತಾ ಫಡ್ನವೀಸ್‌ ಗೆ Y+ ಭದ್ರತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆಯ ಹಿನ್ನೆಲೆಯಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್‌ಗೆ Y+ ಭದ್ರತೆಯನ್ನು ನೀಡಿದ ಗಂಟೆಗಳ ನಂತರ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ ಅಮೃತಾ ಫಡ್ನವಿಸ್‌ಗೆ ಇದೇ ರೀತಿಯ ಭದ್ರತೆಯನ್ನು ಒದಗಿಸಲಾಗಿದೆ. ಮಹಾರಾಷ್ಟ್ರ ಪೊಲೀಸರ ರಕ್ಷಣೆ ಮತ್ತು ಭದ್ರತಾ ವಿಭಾಗವು ಬೆದರಿಕೆಯ ಗ್ರಹಿಕೆಯನ್ನು ವಿಶ್ಲೇಷಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಈ ಹಿಂದೆ ಸಲ್ಮಾನ್ ಖಾನ್ ಅವರ ಭದ್ರತೆಯನ್ನು X ನಿಂದ Y+ ಗೆ ಹೆಚ್ಚಿಸಲಾಗಿತ್ತು. ಇದರರ್ಥ ಸ್ಟಾರ್‌ ನಟ ಸಲ್ಮಾನ್‌ ಅವರ ಸುತ್ತ ಎಲ್ಲಾ ಸಮಯದಲ್ಲೂ ಇಬ್ಬರು ಶಸ್ತ್ರಸಜ್ಜಿತ ಗಾರ್ಡ್‌ಗಳು ಇರಲಿದ್ದಾರೆ. ಇದಲ್ಲದೆ, ಎರಡು ಗಾರ್ಡ್‌ಗಳನ್ನು ಅವರ ನಿವಾಸದಲ್ಲಿ ಇರಿಸಲಾಗುತ್ತದೆ. ಬಿಷ್ಣೋಯ್ ಗ್ಯಾಂಗ್ ನಿಂದ ಸಲ್ಮಾನ್ ಖಾನ್ ಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸ್ ರಕ್ಷಣಾ ವಿಭಾಗ ಈ ನಿರ್ಧಾರ ಕೈಗೊಂಡಿದೆ.

ಭದ್ರತಾ ಪರಿಶೀಲನಾ ಸಮಿತಿಯು ರಾಜ್ಯದ ಮುಖ್ಯ ಕಾರ್ಯದರ್ಶಿಯವರ ನೇತೃತ್ವದಲ್ಲಿದೆ, ಅವರು ಭದ್ರತಾ ಕವರ್ ಅನ್ನು Y+ ಗೆ ಅಪ್‌ಗ್ರೇಡ್ ಮಾಡಲು ಅನುಮೋದಿಸಿದ್ದಾರೆ.

ಈ ಹಿಂದೆ ಬೆದರಿಕೆಯ ಹಿನ್ನೆಲೆಯಲ್ಲಿ ಬಾಲಿವುಡ್‌ ಸ್ಟಾರ್‌ ನಟ ಅಕ್ಷಯ ಕುಮಾರ್‌ ಹಾಗೂ ನಟ್‌ ಅನುಪಮ್‌ ಖೇರ್‌ ಅವರಿಗೂ X ಕೆಟಗರಿ ಭದ್ರತೆ ನೀಡಲಾಗಿತ್ತು. ಪ್ರಸ್ತುತ ದೇವೇಂದ್ರ ಫಡ್ನವೀಸ್‌ ಪತ್ನಿ ಅಮೃತಾ ಫಡ್ನವೀಸ್‌ ಅವರಿಗೆ Y+ ಭದ್ರತೆ ನೀಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!