Thursday, August 18, 2022

Latest Posts

ಕಾಂಗ್ರೆಸ್ ನವರಿಗೆ ಹಿಂದುಳಿದವರ ಅಭಿವೃದ್ಧಿ ಬೇಕಿಲ್ಲ: ಸಚಿವ ಕೆ.ಎಸ್.ಈಶ್ವರಪ್ಪ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………

ಹೊಸ ದಿಗಂತ ವರದಿ, ಬಳ್ಳಾರಿ:

ಜಾತಿ ಸಮೀಕ್ಷೆ ವಿಚಾರದಲ್ಲಿ ಕಾಂಗ್ರೆಸ್ ತನ್ನ ಕೊಳಕನ್ನು ಪ್ರದರ್ಶಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಕಿಡಿಕಾರಿದರು.
ನಗರದ ಜಿ.ಪಂ.ಕಚೇರಿ ಸಭಾಂಗಣದಲ್ಲಿ ‌ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದರು. ಜಾತಿ ಗಣತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿ.ಎಂ.ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭಾಜಪಾ ವಿರುದ್ದ ನಾನಾ ಆರೋಪಗಳನ್ನು ಮಾಡುತ್ತಿದ್ದು, ಇದು ಶುದ್ಧ ಸುಳ್ಳು, ಕಾಂಗ್ರೆಸ್ ನವರಿಗೆ ಹಿಂದುಳಿದವರ ಅಭಿವೃದ್ಧಿ ಬೇಕಿಲ್ಲ, ಇತಿಹಾದಲ್ಲೇ ನಮ್ಮ ಸರ್ಕಾರದಲ್ಲಿ 27 ಜನ ಹಿಂದುಳಿದವರು ಸಚಿವರಾಗಿದ್ದು, ಅದರಲ್ಲಿ 20 ಜನ ದಲಿತರೇ ಸಚಿವರಾಗಿದ್ದಾರೆ, ಇದನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕು ಎಂದು ಕೈ ನಾಯಕರ ವಿರುಧ್ಧ ಹರಿಹಾಯ್ದರು. ಸಿದ್ದರಾಮಯ್ಯ ಅವರು ಸಿ.ಎಂ.ಆಗಿದ್ದಾಗ ವರದಿ ಸಿದ್ದವಾಗಿತ್ತು. ಆದರೇ, ಅಂಕಿತ ಹಾಕಲಿಲ್ಲ. ಜಾತಿ ಸಮೀಕ್ಷೆಗಾಗಿ 160 ಕೋಟಿ ರೂ.ಖರ್ಚು ಮಾಡಿದೆ. ವರದಿಗೆ ಅಂಕಿತ ಹಾಕುವಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬೇಜವಾಬ್ದಾರಿ ಪ್ರದರ್ಶಿಸುವ ಮೂಲಕ ಹಿಂದುಳಿದವರಿಗೆ‌ ಮೋಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರ ಅವಧಿಯಲ್ಲಿ ಕುಡಿವ ನೀರು ಸರಬರಾಜು ಮಾಡುವ ಯೋಜನೆಯಲ್ಲಿ 600 ಕೋಟಿ ರೂ.ಅವ್ಯವಹಾರ ಆಗಿದೆ ಎನ್ನುವ ಆರೋಪಗಳಿದ್ದು, ಅದು‌ ಬೇನಾಮಿ ಖಾತೆಗೆ ಹಣ ವರ್ಗಾವಣೆಯಾಗಿದೆ ಎನ್ನುವ ಗಂಭೀರ ಆರೋಪಗಳಿವೆ, ಈ ಕುರಿತು ತನಿಖೆಗೆ ಸಮೀತಿ ರಚಿಸಿದ್ದು, ವರದಿ ಬಂದ ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ರಾಜ್ಯದಲ್ಲಿ 6 ಸಾವಿರ ಗ್ರಾ.ಪಂ.ಗಳಿದ್ದು, 90 ಸಾವಿರ ಸದಸ್ಯರಿದ್ದಾರೆ. ಬಹುತೇಕ ಜನರು ಮಹಿಳೆಯರಿದ್ದಾರೆ, ಕೆಲವರು ಅನಕ್ಷರಸ್ಥರಿದ್ದಾರೆ, ಅವರೆಲ್ಲರಿಗೂ ಸದಸ್ಯರ ಜವಾಬ್ದಾರಿ ಏನು, ಗೆಲುವು ಅಷ್ಟೇ ಅಲ್ಲ, ನಮ್ಮ ಕೆಲಸ ಏನು, ಸರ್ಕಾರದ ಯೋಜನೆಗಳ ಬಗ್ಗೆ ಹಾಗೂ ಅನುದಾನದ ಬಗ್ಗೆ ತಾಲೂಕು ಕೇಂದ್ರಗಳಲ್ಲಿ ಸಮರ್ಪಕ ಮಾಹಿತಿ ನೀಡಲು ತೀರ್ಮಾನಿಸಲಾಗಿತ್ತು. ಆದರೇ, ಕೋವಿಡ್-19 ಹಿನ್ನೆಲೆ ತರಬೇತಿ‌ ನೀಡೋಕೆ ಆಗಲಿಲ್ಲ. ಯಾರೋಬ್ಬರೂ ಹಸಿವಿನಿಂದ ಬಳಲಬಾರದು ಎನ್ನುವ ಪ್ರಧಾನ ಮಂತ್ರಿ ಮೋದಿಜೀ ಅವರ ಕನಸು ನನಸು ನರೇಗಾ ಯೋಜನೆ ಮೂಲಕ ಮಾಡಲಾಗುತ್ತಿದೆ ಎಂದರು.
ಅಂತರ್ಜಲ ಮಟ್ಟ ಹೆಚ್ಚಿಸುವುದು ಹಾಗೂ ಕುಡಿವ ನೀರಿನ ಬವಣೆ ತಪ್ಪಿಸಲು ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ 28 ಸಾವಿರ ಕೆರೆಗಳಿದ್ದು, ಅವುಗಳ ಅಭಿವೃದ್ಧಿಗೊಳಿಸಲು ನರೇಗಾ ಯೋಜನೆಯಡಿ ಮುಂದಾಗಿದ್ದೇವೆ, ನೇರವಾಗಿ ಗ್ರಾ.ಪಂ.ಗೆ ಅಧಿಕಾರ‌ ನೀಡಲಾಗಿದೆ. ಒಂದು ವರ್ಷದಲ್ಲೇ ಎಲ್ಲ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಗುರಿ ಇಟ್ಟು ಕೊಳ್ಳ ಲಾಗಿದೆ. ರಾಜ್ಯದ ಕೆಲ ಕಡೆ ಕೆರೆಗಳ ಒತ್ತುವರಿ‌ ಮಾಡಿಕೊಂಡಿರುವುದು ಬಯಲಾಗಿದೆ. ಈ ಕುರಿತು ಮೊದಲು ಮನವಿ ಮಾಡಿ, ಅದಕ್ಕೂ‌ ಬಗ್ಗದಿದ್ದರೇ ಕಾನೂನು ಕ್ರಮದ ಮೂಲಕ ಬಿಸಿ ಮುಟ್ಟಿಸಲಾಗುವುದು. ಎಷ್ಟೇ ಪ್ರಭಾವಿ ಇರಲಿ, ಒತ್ತುವರಿ ಪ್ರದೇಶವನ್ನು ಬಿಡುವ ಮಾತೇ ಇಲ್ಲ ಎಂದು ಖಡಕ್ ಎಚ್ಚರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!