ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಒಳ ಸಂಚು: ಸಚಿವ ಮುನಿರತ್ನ

ಹೊಸ ದಿಗಂತ ವರದಿ , ಹಾವೇರಿ:

ಯಾರಿಗೆ, ಹೆಂಗೆ ಕೊಡುತ್ತೀರ ಶೇ.40  ಕಮೀಷನನ್ನು. ಇದರಲ್ಲಿ ಜಿಎಸ್‌ಟಿ, ಇಎಲ್‌ಟಿ, ರಾಯಲ್ಟಿ ಎಲ್ಲವೂ ಸೇರಿ ಎಲ್ಲವೂ ಸೇರಿ ಶೇ.40 ರಷ್ಟಾಗುತ್ತದೆ ಎಂದಾದರೆ ಕೇವಲ ಶೇ.40 ರಷ್ಟೇ ಕಮೀಷನ್ ಎಂದು ಹೇಳಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸವನ್ನು ಮಾಡಬಾರದು ಎಂದು ತೋಟಗಾರಿಕೆ ಸಚಿವ ಮುನಿರತ್ನ ಅವರು ವಿರೋಧ ಪಕ್ಷದವರನ್ನು ತರಾಟಗೆ ತಗೆದುಕೊಂಡರು.
ಜಿಲ್ಲೆಯ ಹಾನಗಲ್ಲ ತಾಲೂಕಿನ ಯಲವಟ್ಟಿ ಗ್ರಾಮದಲ್ಲಿ ಮಾವು ಸಂಸ್ಕರಣಾ ಘಟಕ ಸ್ಥಾಪನೆಗೆ ಉದ್ದೇಶಿಸಿರುವ ಸ್ಥಳ ಪರಿಶೀಲನೆ ಆಗಮಿಸಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸರ್ಕಾರಕ್ಕೆ ಕೆಟ್ಟ ಹೆಸರು ತರುವುದಕ್ಕೆ ಕೆಲವರು ಸೇರಿ ಮಾಡುತ್ತಿರುವ ವಳ ಸಂಚಿದು. ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದಕ್ಕೆ ಕೆಲ ಎಜೆಂಟರೇ ಇದ್ದಾರೆ. ಶೇ.40 ರಷ್ಟು ಕಮೀಷನ್ ನೀಡಿ ಹೇಗೆ ಕೆಲಸ ಮಾಡುವುದಕ್ಕೆ ಸಾಧ್ಯವಾಗುತ್ತದೆ. ಬದುಕಲು ಹೇಗೆ ಸಾಧ್ಯವಾಗುತ್ತದೆ. ಇದೆಲ್ಲ ಕೇವಲ ಊಹಾಪೋಹವಷ್ಟೆ.
ಗುತ್ತಿಗೆದಾರ ಸಂತೋಷ ಅವರು ಮಾಡಿದ ಕೆಲಸದ ಮೊತ್ತ ಬಾರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲಾಗುವುದು ಎಂದು ಹೇಳೀದ್ದರೆ. ಇದನ್ನೆ ಕೆಲವರು ತಮ್ಮ ಅವಕಾಶಕ್ಕೆ ಬಳಸಿಕೊಂಡು ಅವರಿಗೆ ಪ್ರಚೋದನೆ ನೀಡಿ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಲಾಗಿದೆ ಎಂದು ಹರಿಹಾಯ್ದರು.

ತನಿಖೆಯಾಗಬೇಕು
ಸಂತೋಷ ಅವರು ಎಂದು ಹೇಳಿಕೆ ನೀಡಿದ್ದಾರೋ ಅಂದಿನಿಂದ ಅವರ ಹಿಂದೆ ಬಿದ್ದು ಅವರು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದ್ದಾರಷ್ಟೆ. ಇದು ಸಂಪೂರ್ಣವಾಗಿ ತನಿಖೆಯಾಗಬೇಕು. ಆಗ ಸಂತೋಷ ಅವರು ಹೇಳಿಕೆ ನೀಡಿದಾಗಿನಿಂದ ಅವರ ಹಿಂದೆ ಯಾರು ಬಿದ್ದಿದ್ದಾರೆ ಎನ್ನುವುದು ಬೆಳಕಿಗೆ ಬರುತ್ತದೆ ಆದ ಅವರೆಲ್ಲೀಚೆ ಬರುತ್ತಾರೆ.
ವಿಧಾನಸಭೆಯ ಪ್ರತಿ ಗೋಡೆನೂ ದುಡ್ಡು ದುಡ್ಡು ಎಂಬ ಹೇಳಿಕೆಗೆ ಪ್ರತಿಕ್ರೀಯೆ ನೀಡಿದ ಸಚಿವ ಮುನಿರತ್ನ ಅವರು. ನೋಡಿ ದುಡ್ಡು ಯಾರ ಹತ್ತಿರ ಹೆಚ್ಚಿದೆ ಎನ್ನುವುದನ್ನು ರಾಜ್ಯದ ಪ್ರತಿ ಗೋಡೆನನೂ ಹೇಳುತ್ತವೆ. ರೋಡಲ್ಲಿರುವ ಲೈಟ ಕಂಬಗಳನ್ನು ಕೇಳಿದರೂ ಹೇಳುತ್ತವೆ ಎಂದು ಡಿಕೆಶಿ ಅವರಿಗೆ ಟಾಂಗ್ ನೀಡದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ, ಅಧಿಕಾರಿಗಳು ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!