ಎರಡೇ ದಿನಕ್ಕೆ 4.3 ಕೋಟಿ ರೂ. ಗಳಿಸಿತು ರಾಜ್ ಕುಮಾರ್‌ ರಾವ್‌ ನಟನೆಯ ಬಧಾಯಿ ದೊ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಟ ರಾಜಕುಮಾರ್‌ ರಾವ್‌ ಹಾಗೂ ನಟಿ ಭೂಮಿ ಪೆಡ್ನೇಕರ್‌ ನಟಿಸಿರುವ ಬಧಾಯಿ ದೋ ಚಿತ್ರ ಭರ್ಜರಿ ಪ್ರದರ್ಶನ ನೀಡುತ್ತಿದೆ.
ಚಿತ್ರ ಬಿಡುಗಡೆಯಾದ ಎರಡೇ ದಿನಕ್ಕೆ 4.30 ಕೋಟಿ ರೂ, ಬಾಚಿಕೊಂಡಿದೆ. ಮೊದಲ ದಿನ ಮಲ್ಟಿಪ್ಲೆಕ್ಸ್‌ ಗಳಲ್ಲಿ 45 ಲಕ್ಷ ರೂ ಗಳಿಸಿದ್ದ ಚಿತ್ರ ಅದೇ ಮಲ್ಟಿಪ್ಲೆಕ್ಸ್‌ ಗಳಲ್ಲಿ 75 ಲಕ್ಷ ಗಳಿಸಿದೆ.
ಚಿತ್ರತಂಡ ವಾರಾಂತ್ಯದಲ್ಲಿ 7 ಕೋಟಿ ರೂ. ಗಳಿಸುವ ಮೂಲಕ ವಾರದಲ್ಲಿ 10 ಕೋಟಿ ರೂ. ಗಳಿಸುವ ಗುರಿ ಹೊಂದಿದೆ.
ಈ ಚಿತ್ರವನ್ನು ಹರ್ಷವರ್ಧನ್‌ ಕುಲಕರಣಿ ನಿರ್ದೇಶನ ಮಾಡಿದ್ದು, ಜಂಗ್ಲೀ ಪಿಕ್ಚರ್ಸ್‌ ನಿರ್ಮಾಣ ಮಾಡಿದೆ.
ಈ ಚಿತ್ರವು ಲ್ಯಾವೆಂಡರ್‌ ಮದುವೆಯ ಪರಿಕಲ್ಪನೆಯನ್ನು ಮೂಡಿಸುತ್ತದೆ. ಈ ಚಿತ್ರದ್ಲಿ ಸಲಿಂಗಕಾಮಿಯಾಗಿ ಕಾಣಿಸಿಕೊಂಡಿರುವ ರಾಜಕುಮಾರ್‌ ರಾವ್‌ ಹಾಗೂ ಭೂಮಿ ಹೇಗೆ ಪ್ರೀತಿಸಿ ಮದುವೆಯಾಗುತ್ತಾರೆ ಅನ್ನೋದನ್ನ ಈ ಚಿತ್ರದಲ್ಲಿ ಪ್ರಸ್ತುತಪಡಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!