CINE NEWS | ಬಾಫ್ಟಾ ಪ್ರಶಸ್ತಿ 2023: ಅಂತಿಮ ನಾಮನಿರ್ದೇಶನ ಪಟ್ಟಿಯಿಂದ ಹೊರಗುಳಿದ ‘ಆರ್ ಆರ್ ಆರ್’

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಚಲನಚಿತ್ರ ನಿರ್ಮಾಪಕ ಎಸ್‌ಎಸ್ ರಾಜಮೌಳಿ ಅವರ ಆಕ್ಷನ್ ಬ್ಲಾಕ್‌ಬಸ್ಟರ್ ʼಆರ್‌ಆರ್‌ಆರ್ʼ 2023ರ ಬಾಫ್ಟಾ ಫಿಲ್ಮ್ ಅವಾರ್ಡ್ಸ್‌ನ ಅಂತಿಮ ನಾಮನಿರ್ದೇಶನ ಪಟ್ಟಿಯಿಂದ ತೆಗೆದು ಹಾಕಲಾಗಿದೆ.

ಇಂಗ್ಲೀಷ್ ಯೇತರ ಭಾಷೆಯ ವಿಭಾಗದ ಧೀರ್ಘ ಪಟ್ಟಿಯಲ್ಲಿ ಆರ್ ಆರ್ ಆರ್ ಚಿತ್ರ ಇತ್ತು. ಆದರೆ ಅಂತಿಮ ಐದು ನಾಮ ನಿರ್ದೇಶಿತ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಯಿತು ಎಂದು ಬ್ರಿಟಿಷ್ ನಟರಾದ ಹೇಯ್ಲಿ ಅಟ್ವೆಲ್ ಮತ್ತು ತೊಹೀಬ್ ಜಿಮೋಹ್ ಅವರು ಲೈವ್‌ಸ್ಟ್ರೀಮ್ ಮೂಲಕ ಘೋಷಿಸಿದರು.

ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್, ಅರ್ಜೆಂಟೀನಾ, 1985, ಕೊರ್ಸೇಜ್, ಡಿಸಿಷನ್ ಟು ಲೀವ್ ಮತ್ತು ದಿ ಕ್ವೈಟ್ ಗರ್ಲ್ ಚಿತ್ರಗಳು ಅಂತಿಮವಾಗಿ ನಾಮನಿರ್ದೇಶಿತ ಚಿತ್ರಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!