spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬಾಗಲಕೋಟೆ| 30 ವರ್ಷಗಳಿಂದ ಸ್ಥಗಿತಗೊಂಡಿದ್ದ ಗ್ರಾಮದೇವತೆ ಜಾತ್ರೆ ಅದ್ಧೂರಿಯಾಗಿ ಮಾಡಲು ನಿರ್ಧಾರ

- Advertisement -Nitte

ಹೊಸ ದಿಗಂತ ವರದಿ, ಬಾಗಲಕೋಟೆ:

ಐತಿಹಾಸಿಕ ಗ್ರಾಮದೇವಿಯಾದ ದ್ಯಾಮವ್ವದೇವಿ ಜಾತ್ರೆ ಮೂರು ದಶಕಗಳ ನಂತರ ಡಿ.20ರಿಂದ ನ.24 ವರೆಗೆ ಅದ್ದೂರಿಯಾಗಿ ಜಾತ್ರಾಮಹೋತ್ಸವ ಆಚರಣೆ ಮಾಡಲು ನಿರ್ಧರಿಸಲಾಗಿದೆ ಎಂದು ಗ್ರಾಮದೇವಿ ಸೇವಾ ಸಮಿತಿಯ ಗೌರವಾಧ್ಯಕ್ಷರಾಗಿ ಶ್ರೀಮಂತ ಬಸವಪ್ರಭು ಸರನಾಡಗೌಡರ ಹೇಳಿದರು. ಶುಕ್ರವಾರ ನವನಗರದಲ್ಲಿ‌ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿ.20 ಸೋಮವಾರ ಬೆಳಗ್ಗೆ 9ಗಂಟೆಗೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀ ದೇವಿಯ ಭವ್ಯ ಮೆರವಣಿಗೆ ನಡೆಯಲಿದೆ. 21ರಂದು ಮಂಗಳವಾರ ದಿಂದ ಬುಧವಾರವರೆಗೆ ಹೋಮ ಹವನ ಹಾಗೂ ಶ್ರೀದೇವಿಯವರ ಪ್ರಾಣಪ್ರತಿಷ್ಠಾಪನೆ ಮಾಡಲಾಗುವುದು .ಡಿ.23ರಿಂದ 24ವರೆಗೆ ಸಾರ್ವಜನಿಕರಿಂದ ಶ್ರೀದೇವಿಗೆ ಉಡಿತುಂಬುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಣೆ ನೀಡಿದರು.
ಅಶೋಕ ಲಿಂಬಾವಳಿ ಮಾತನಾಡಿ, ಗ್ರಾಮದೇವತೆ ಜಾತ್ರಾ ಮಹೋತ್ಸವ ನಿಮಿತ್ತ ಬಾಗಲಕೋಟೆ, ವಿದ್ಯಾಗಿರಿ, ನವನಗರದ ಹಿರಿಯರು,ನಗರಸಭೆ ಎಲ್ಲ ಸದಸ್ಯರು ಪ್ರಮುಖರೊಂದಿಗೆ ಚರ್ಚಿಸಿ ಅದ್ದೂರಿ ಜಾತ್ರೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಜಾತ್ರೆಯ ನಿಮಿತ್ತ ಬಾಗಲಕೋಟೆ ಯಲ್ಲಿ ಅಲಂಕಾರ‌ ಮಾಡಲಾಗುವುದು.‌ದೇವಿಯ ಅದ್ದೂರಿ ಮೆರವಣಿಗೆಯನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಸಲಾಗುವುದು. ಎಲ್ಲ ರಾಜಕೀಯ ಪಕ್ಷದ ಮುಖಂಡರನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಮಿತಿ ಯ ಬಂಡೇರಾವ್ ಸರ್ ದೇಸಾಯಿ,ಸಂಗಯ್ಯ ಸರಗನಸಚಾರಿ,, ಅಶೋಕ ಲಿಂಬಾವಳಿ ,ಗುಂಡುರಾವ್ ಶಿಂಧೆ,
ಕಾಂತುಬಪತ್ತಾರ,ಸದಾನಂದ ನಾರಾ, ಶ್ರೀನಾಥ ಸಜ್ಜನ್, ಸುರೇಶ ಮಜ್ಜಗಿ,
ಮುಂತಾದವರು ಇದ್ದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss