ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಬಾಗಲಕೋಟೆ:
ಕೋವಿಡ್ ಎರಡನೇ ಅಲೆ ದಿನದಿಂದ ದಿನಕ್ಕೆ ವ್ಯಾಪಕವಾಗಿ ತನ್ನ ಕದಂಬಬಾಹು ಚಾಚುತ್ತಿದ್ದು ಇದನ್ನು ಕಟ್ಟಿಹಾಕಲು ಮೇ 10 ರಿಂದ ಹದಿನೈದು ದಿನಗಳ ಕಾಲ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಲಾಕ್ ಡೌನ್ ಗೆ ಜಿಲ್ಲೆಯ ಜನ ಸಹಕರಿಸಿದ್ದಾರೆ.
ಬೆಳಗ್ಗೆ 6 ರಿಂದ 10ರವರೆಗೆ ತರಕಾರಿ, ದಿನಸಿ ಪದರದ ಖರೀದಿಗೆ ಅವಕಾಶ ನೀಡಲಾಯಿತು. ಇನ್ನೂ ಬೈಕ್ ಸವಾರರು ಅನವಶ್ಯಕವಾಗಿ ತಿರುಗಾಡುವವರನ್ನು ಪೊಲೀಸರು ಹಿಡಿದಿ ಕೊರೋನಾ ಬಗ್ಗೆ ಪಾಠ ಮಾಡಿದರು.
ಅನವಶ್ಯಕವಾಗಿ ಮಾರುಕಟ್ಟೆಗೆ ಬೈಕುಗಳನ್ನು ತೆಗೆದುಕೊಂಡ ಹೋದರೆ ಅಂತಹವರನ್ನು ಹಿಡಿದು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸಾರ್ ಅವರು ಎಚ್ಚರಿಕೆ ನೀಡಿದ್ದನ್ನು ಜಿಲ್ಲೆಯಲ್ಲಿಯ ಜನ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ ಯುವರು ಬೈಕ್ ತೆಗೆದುಕೊಂಡು ಹೋದರೆ ಸೀಜ್ ಆಗುತ್ತೆ ಎಂಬ ಭಯದಿಂದ ಯುವಕರು ಅನವಶ್ಯಕವಾಗಿ ಬೈಕು ಹತ್ತಿ ಹೋಗದೆ ಮನೆಯಲ್ಲೇ ಉಳಿದಿದ್ದಾರೆ.
ಬೆಳಗ್ಗೆ ಹತ್ತು ಗಂಟೆಯಾಗುತ್ತಿದ್ದಂತೆ ನಗರದಲ್ಲಿನ ಕಿರಾಣಿ ಮಾರ್ಕೆಟ್ ಬಂದ್ ಮಾಡಿಸಲಾಯಿತು. ತರಕಾರಿಯನ್ನು ತಳ್ಳುವ ಗಾಡಿಯಲ್ಲಿ ಮಾರಾಟಕ್ಕೆ ಅವಕಾಶ ನೀಡಲಾಗಿತ್ತು.ಮಾರುಕಟ್ಟೆಗೆ ಜನ ಕಾಲ್ನಡಿಗೆಯಲ್ಲಿ ಆಗಮಿಸಿ ದಿನಸಿ ಖರೀದಿಸಿದರು.
ಜಿಲ್ಲೆಯ ಪ್ರತಿ ಗಡಿಭಾಗದಲ್ಲಿ ಚೆಕ್ ಪೋಸ್ಟ್ ಮಾಡಲಾಗಿದೆ. ಬೇರೆ ಜಿಲ್ಲೆಯಿಂದ ಬರಲು ಅವಕಾಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ನಗರ ಮಟ್ಟದಲ್ಲಿ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಅಧಿಕಾರಿಗಳು, ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕಟ್ಟುನಿಟ್ಟಾಗಿ ತಪಾಸಣೆ ಮಾಡಲಾಗುತ್ತಿದೆ. ಜನರು ಕೂಡ ಸಹಕರಿಸಬೇಕು ಎಂದು ಎಸ್ಪಿಯವರು ತಿಳಿಸಿದ್ದಾರೆ.