spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆರ್ಯನ್​ ಖಾನ್​ಗೆ ನಿರಾಸೆ: ಜಾಮೀನು ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿರುವ ಆರ್ಯನ್​ ಖಾನ್​ಗೆ ಜಾಮೀನು ಎಂಬುದು ಮರೀಚಿಕೆಯಾಗಿದೆ. ಎನ್​ಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿರುವ ಶಾರುಖ್​ ಖಾನ್​ ಪುತ್ರ ಸದ್ಯ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ.
ಇಂದು ಆರ್ಯನ್​ ಖಾನ್​ ಜಾಮೀನು ಅರ್ಜಿ ವಿಚಾರಣೆ ನಡೆಸಿದ ವಿಶೇಷ ಎನ್​ಡಿಪಿಎಸ್​ ನ್ಯಾಯಾಲಯ ಅರ್ಜಿ ವಿಚಾರಣೆ ದಿನಾಂಕವನ್ನು ಗುರುವಾರಕ್ಕೆ (ಅ.14) ಮುಂದೂಡಿದೆ. ಅಲ್ಲಿಯವರೆಗೂ ಆರ್ಯನ್​ ಖಾನ್​ ಜೈಲಿನಲ್ಲಿ ದಿನ ಕಳೆಯದೇ ಬೇರೆ ದಾರಿ ಇಲ್ಲ.
ಆರ್ಯನ್​ ಖಾನ್​ಗೆ ಜಾಮೀನು ಕೊಡಿಸಲು ಶಾರುಖ್​ ಖಾನ್​ ಹರಸಾಹಸ ಮಾಡುತ್ತಿದ್ದರು. ಪುತ್ರ ಅರೆಸ್ಟ್​ ಆದ ದಿನದಿಂದಲೂ ಅವರಿಗೆ ನೆಮ್ಮದಿಯೇ ಇಲ್ಲದಂತಾಗಿದೆ.

ಆರ್ಯನ್​ ಪರ ವಕೀಲರು ಹೇಳಿದ್ದೇನು?
‘ಅಕ್ಟೋಬರ್ 3ರಿಂದ ಆರ್ಯನ್​ ವಿಚಾರಣೆ ನಡೆಸಿಲ್ಲ. ಮ್ಯಾಜಿಸ್ಟ್ರೇಟ್ ಕೋರ್ಟ್​​​ನಲ್ಲಿ ಜಾಮೀನು ಅರ್ಜಿ ವಿಚಾರಣೆಗೆ ಎನ್​ಸಿಬಿ ವಿರೋಧ ಮಾಡಿತ್ತು. ಹೀಗಾಗಿಯೇ ಮ್ಯಾಜಿಸ್ಟ್ರೇಟ್ ಕೋರ್ಟ್ ಜಾಮೀನು ನಿರಾಕರಿಸಿದೆ. ಎನ್​​ಸಿಬಿ ಕಸ್ಟಡಿ ಅಗತ್ಯವಿಲ್ಲ ಎಂದು ಆರ್ಯನ್​ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ’ ಎಂದರು ಅಮಿತ್​ ದೇಸಾಯಿ.
‘ಆರ್ಯನ್ ಖಾನ್​ಗೆ ಯಾರು ಆಹ್ವಾನ ನೀಡಿದ್ದರೋ ಅವರನ್ನು ಬಂಧಿಸಿಲ್ಲ. ಪ್ರತೀಕ್ ಗಾಬಾ ಎಂಬಾತ ಆರ್ಯನ್ ಖಾನ್ ಅವರನ್ನು ಪಾರ್ಟಿಗೆ ಆಹ್ವಾನಿಸಿದ್ದ. ಆತನನ್ನು ಬಂಧಿಸಬೇಕಿತ್ತು. ಎನ್‌ಡಿಪಿಎಸ್ ಕಾಯಿದೆಯ 27 ಎ ಸೆಕ್ಷ್​ ಕಳ್ಳಸಾಗಣಿಕೆಗೆ ಸಂಬಂಧಿಸಿದೆ. ಈ ಸೆಕ್ಷನ್ ಆರ್ಯನ್ ಖಾನ್‌ಗೆ ಅನ್ವಯಿಸುವುದಿಲ್ಲ. ಆರ್ಯನ್​ ಯಾವುದೇ ಅಕ್ರಮ ಕಳ್ಳಸಾಗಣೆಯಲ್ಲಿ ಭಾಗಿಯಾಗಿಲ್ಲ. ಈ ಸೆಕ್ಷನ್ ವಿಧಿಸಿರುವುದು ಅಸಂಬದ್ಧ’ ಆರ್ಯನ್ ಖಾನ್ ಪರ ವಕೀಲ ಅಮಿತ್ ದೇಸಾಯಿ ವಾದ ಮಂಡಿಸಿದರು.
‘ಇವರು ಡ್ರಗ್ಸ್ ಪೆಡ್ಲರ್​​ಗಳು ಅಲ್ಲ. ಡ್ರಗ್ಸ್ ಕಳ್ಳ ಸಾಗಾಟವನ್ನು ಮಾಡಿಲ್ಲ. ಇವರೆಲ್ಲಾ ಚಿಕ್ಕ ಮಕ್ಕಳು. ಅವರು ಪಾಠವನ್ನು ಕಲಿತಿದ್ದಾರೆ. ಜೈಲಿನಲ್ಲಿ ದೀರ್ಘ ಅವಧಿಯವರೆಗೂ ಇರುವುದು ಬೇಡ. ಆರ್ಯನ್ ಖಾನ್​ಗೆ ಜಾಮೀನು ನೀಡಿ’ ಎಂದು ಅಮಿತ್ ದೇಸಾಯಿ ಕೋರ್ಟ್​ಗೆ ಮನವಿ ಮಾಡಿದರು.
ಎನ್​ಸಿಬಿ ಪರ ವಕೀಲರು ವಾದ ಏನು?
ಎನ್​ಸಿಬಿ ಪರ ವಕೀಲರಾದ ಅನಿಲ್​​ ಸಿಂಗ್ ವಾದ ಮಂಡಿಸಿದರು. ‘ಡ್ರಗ್ಸ್ ಕಳ್ಳ ಸಾಗಣೆ ಬಹಳ‌ ಗಂಭೀರ, ಕಳಕಳಿಯ ವಿಷಯ. ರೇವ್ ಪಾರ್ಟಿಗಳಲ್ಲಿ ಯುವಜನತೆ ಡ್ರಗ್ಸ್ ಸೇವನೆ ಮಾಡುತ್ತಾರೆ. ಇದರಿಂದ ದೇಶಕ್ಕೆ ತೊಂದರೆ ಆಗುತ್ತದೆ. ಇದು ಒಂದಿಬ್ಬರ ಡ್ರಗ್ಸ್ ಸೇವನೆಗೆ ಸಂಬಂಧಪಟ್ಟಿದ್ದಲ್ಲ. ನಾವು ಇಡೀ ಜಾಲದ ಬಗ್ಗೆ ತನಿಖೆ ಮಾಡುತ್ತಿದ್ದೇವೆ. ಆರ್ಯನ್ ಖಾನ್​​​ನನ್ನು‌ ಪಾರ್ಟಿಗೆ ಆಹ್ವಾನಿಸಲಾಗಿತ್ತು. ಯಾರು, ಯಾವಾಗ ಆಹ್ವಾನಿಸಿದರು ಎಂದು ಹೇಳುತ್ತಿಲ್ಲ. ಅವರಿಗೆ ಜಾಮೀನು ನೀಡಬಾರದು’ ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss