ಹೊಸದಿಗಂತ ಡಿಜಿಟಲ್ ಡೆಸ್ಕ್:
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್ ಸಹಿತ ಒಟ್ಟು 7 ಆರೋಪಿಗಳಿಗೆ ಜಾಮೀನು ನೀಡಲಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ತಂದೆ ಶಿವನಗೌಡ್ರು ಪ್ರತಿಕ್ರಿಯೆ ನೀಡಿದ್ದಾರೆ. ಆರೋಪಿಗಳಿಗೆ ಜಾಮೀನಾಗಿದೆ ಎಂದು ಮಾಧ್ಯಮಗಳ ಮೂಲಕ ತಿಳಿತು. ಪ್ರಾರಂಭದಲ್ಲಿ ಈಗ ಜಮೀನು ನೀಡಿದ್ದರೂ ತೀರ್ಪಿನಲ್ಲಿ ನ್ಯಾಯ ಸಿಗುತ್ತದೆ. ನಮಗೆ ನ್ಯಾಯಾಂಗದ ಬಗ್ಗೆ ನಂಬಿಕೆ ಇದೆ. ಅದರ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದಾರೆ.
ನಟ ದರ್ಶನ್ ನಿಮ್ಮ ಮನೆಗೆ ಬಂದರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ನಮ್ಮ ಮನೆಗೆ ಬಂದರೆ ಎಂಬ ವಿಚಾರ ನಮ್ಮಲ್ಲಿ ಚರ್ಚೆ ಇಲ್ಲ. ನಮ್ಮ ಮಗನನ್ನ ಕಳೆದುಕೊಂಡಿದ್ದೇವೆ. ದರ್ಶನ್ ಬರುವುದು ಬೇಕಿಲ್ಲ. ನನ್ನ ಮಗನ ಸಾವಿಗೆ ನ್ಯಾಯ ಬೇಕಿದೆ ಅಷ್ಟೇ ಎಂದಿದ್ದಾರೆ.