Tuesday, August 9, 2022

Latest Posts

ಆರ್ಯನ್ ಖಾನ್ ಗೆ ಜಾಮೀನು ಸಿಕ್ಕರೂ ಇಂದು ಬಿಡುಗಡೆ ಇಲ್ಲ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಡ್ರಗ್ಸ್ ಪ್ರಕರಣದಲ್ಲಿ ಆರ್ಯನ್ ಖಾನ್ ಗೆ ಜಾಮೀನು ದೊರಕಿದ್ದು, ಆದರೆ ಇಂದು ಆರ್ಯನ್ ಜೈಲಿನಿಂದ ಬಿಡುಗಡೆಯಾಗುವುದಿಲ್ಲ. ನಾಳೆ ಬೆಳಿಗ್ಗೆ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಆರ್ಥರ್ ರೋಡ್ ಜೈಲು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್‌ಗೆ ಬಾಂಬೆ ಹೈಕೋರ್ಟ್ ಜಾಮೀನು ನೀಡಿರುವುದರಿಂದ ಮನ್ನತ್‌ನಲ್ಲಿ ಸಂಭ್ರಮಾಚರಣೆ ನಡೆದಿದೆ. ಗುರುವಾರ ಸಂಜೆ ಜಾಮೀನು ಮಂಜೂರಾಗಿದ್ದು, ಹೈಕೋರ್ಟ್ ಶುಕ್ರವಾರ ಅವರ ಜಾಮೀನಿನ ಷರತ್ತುಗಳನ್ನು ನಿರ್ದೇಶಿಸಿದೆ.
ಆರ್ಯನ್ ಖಾನ್ ಮತ್ತು ಇತರ ಆರೋಪಿಗಳು 1 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಶ್ಯೂರಿಟಿ ಪಾವತಿಸಬೇಕು. ಜಾಮೀನು ಷರತ್ತುಗಳ ಪ್ರಕಾರ, ಅವರು ಅನುಮತಿಯಿಲ್ಲದೆ ಮುಂಬೈನಿಂದ ಹೊರಗೆ ಪ್ರಯಾಣಿಸಲು ಸಹ ಅನುಮತಿಸಲಾಗುವುದಿಲ್ಲ.
ನಾಳೆ ಬೆಳಗ್ಗೆ ಅವರನ್ನು ಬಿಡುಗಡೆ ಮಾಡುವುದಾಗಿ ಜೈಲು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss