ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಬೈಯಪ್ಪನಹಳ್ಳಿಯಲ್ಲಿ ಸ್ಥಾಪಿಸಲಾಗಿರುವ ಭಾರತದ ಮೊದಲ ಅತ್ಯಾಧುನಿಕ ಕೇಂದ್ರೀಕೃತ ಹವಾನಿಯಂತ್ರಿತ ರೈಲ್ವೆ ಟರ್ಮಿನಲ್ಗೆ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ಹೆಸರನ್ನು ಇಡಲಾಗಿದೆ.
ಈ ಸಂಬಂಧ ಡಿಸಿಎಂ ಲಕ್ಷ್ಮಣ ಸವದಿ ಟ್ವೀಟ್ ಮಾಡಿದ್ದು, ಭಾರತದ ಮೊದಲ ಅತ್ಯಾಧುನಿಕ ಕೇಂದ್ರೀಕೃತ ಹವಾನಿಯಂತ್ರಿತ ರೈಲ್ವೆ ಟರ್ಮಿನಲ್ಗೆ ಕರುನಾಡಿನ ಹೆಮ್ಮೆಯ ಕುವರ, ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಹೆಸರನ್ನು ಇಡಲಾಗಿದೆ. ಆ ಮೂಲಕ ಅವರಿಗೆ ವಿಶೇಷ ಗೌರವ ನೀಡಲಾಗಿದೆ ಅಂತಾ ತಿಳಿಸಿದ್ದಾರೆ.
ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿನ ಭಾರತದ ಮೊದಲ ಅತ್ಯಾಧುನಿಕ ಕೇಂದ್ರೀಕೃತ ಹವಾನಿಯಂತ್ರಿತ ರೈಲ್ವೆ ಟರ್ಮಿನಲ್ಗೆ ಕರುನಾಡಿನ ಹೆಮ್ಮೆಯ ಕುವರ, ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ಹೆಸರನ್ನಿಡುವ ಮೂಲಕ ಅವರಿಗೆ ವಿಶೇಷ ಗೌರವ ನೀಡಲಾಗಿದೆ. pic.twitter.com/sfIl0LfQt1
— Laxman Sangappa Savadi | ಲಕ್ಷ್ಮಣ್ ಸಂಗಪ್ಪ ಸವದಿ (@LaxmanSavadi) March 13, 2021