ಈ ವೀರನಾರಿ ಹೋರಾಟಕ್ಕೆ ಬ್ರಿಟೀಷರು ಕಂಗಾಲಾಗಿದ್ದರು, ಪರಕೀಯರ ಬೆಂಬಲಿಸಿದ್ದಕ್ಕೆ ಪತಿಯನ್ನೇ ತೊರೆದಳು..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ (ಸ್ವಾತಂತ್ರ್ಯೋತ್ಸವ ಅಮೃತಮಹೋತ್ಸವದ ವಿಶೇಷ)
ಬೈಜಾ ಬಾಯಿ (1784-1863) 1784 ರಲ್ಲಿ ಮಹಾರಾಷ್ಟ್ರದ ಕೊಲ್ಲಾಪುರದ ಕಾಗಲ್‌ನಲ್ಲಿ ಜನಿಸಿದರು.
1798 ರ ಫೆಬ್ರವರಿಯಲ್ಲಿ ಅವರು ತಮ್ಮ 14 ನೇ ವಯಸ್ಸಿನಲ್ಲಿ ಗ್ವಾಲಿಯರ್‌ನ ದೊರೆ ದೌಲತ್ ರಾವ್ ಸಿಂಧಿಯಾ ಅವರನ್ನು ವಿವಾಹವಾದರು. ಆಕೆ ಅದ್ಭುತ ಕುದುರೆ ಸವಾರಿಗೆ ಹೆಸರಾಗಿದ್ದರು ಮತ್ತು ಕತ್ತಿ ಮತ್ತು ಈಟಿಯೊಂದಿಗೆ ಹೋರಾಟದಲ್ಲಿ ತರಬೇತಿ ಪಡೆದಿದ್ದರು. ಬ್ರಿಟಿಷರೊಂದಿಗಿನ ಮರಾಠಾ ಯುದ್ಧಗಳ ಸಮಯದಲ್ಲಿ ಅವರು ಪತಿಯೊಂದಿಗೆ ಕದನದಲ್ಲಿ ಭಾಗವಹಿಸಿದ್ದರು.
ಅಸ್ಸೇ ಕದನದಲ್ಲಿ ವೆಲ್ಲಿಂಗ್ಟನ್ ಡ್ಯೂಕ್ ಆರ್ಥರ್ ವೆಲ್ಲೆಸ್ಲಿ ವಿರುದ್ಧ ಹೋರಾಡಿ ಭಾರತದ ನಾರಿಯರ ಹೋರಾಟ ಶಕ್ತಿಯನ್ನು ಬ್ರಿಟೀಷರಿಗೆ ಪರಿಚಯಿಸಿದರು. ಪಿಂಡಾರಿಗಳ ವಿರುದ್ಧ ಬ್ರಿಟೀಷರ ಕಾರ್ಯಾಚರಣೆಯ ಸಂದರ್ಭದಲ್ಲಿ ವಸಹಾತುಶಾಹಿಗಳ ವಿರುದ್ಧ ಮರಾಟ ಪೇಶ್ವೆ ಬಾಜಿ ರಾವ್ II ರನ್ನು ಬೆಂಬಲಿಸುವಂತೆ ತಮ್ಮ ಪತಿಯನ್ನು ಒತ್ತಾಯಿಸಿದರು. ದೌಲತ್ ರಾವ್ ಬ್ರಿಟಿಷರ ಒತ್ತಡಕ್ಕೆ ಮಣಿದು ಬೇಡಿಕೆಗಳನ್ನು ಒಪ್ಪಿಕೊಂಡಾಗ, ಕ್ರೋಧಗೊಂಡ ಬೈಜಾ ಬಾಯಿ ಪತಿಯನ್ನು ಹೇಡಿಯೆಂದು ಜರೆದು ತೊರೆದಳು. ಬ್ರಿಟಿಷರಿಗೆ ಅಜ್ಮೀರ್‌ನ ಸಿಂಧಿಯಾ ಶರಣಾಗತಿಯಾಗುವುದನ್ನು ತೀವ್ರವಾಗಿ ವಿರೋಧಿಸಿದರು. ಬೈಜಾ ಬಾಯಿ 1863 ರಲ್ಲಿ ಗ್ವಾಲಿಯರ್‌ನಲ್ಲಿ ನಿಧನರಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!