ಹೊಸದಿಗಂತ ಆನ್ ಲೈನ್ ಡೆಸ್ಕ್:
ನಟ ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಭಜರಂಗಿ 2 ಚಿತ್ರ ಇದೇ ತಿಂಗಳ ಅಂತ್ಯದೊಳಗೆ ಬಿಡುಗಡೆಯಾಗಲಿದೆ.
ಅಷ್ಟೇ ಅಲ್ಲಾ.. ಬಹುಭಾಷೆಗಳಲ್ಲಿ ರಿಲೀಸ್ ಆಗುತ್ತಿರುವ ಭಜರಂಗಿ 2 ಚಿತ್ರ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲೂ 400 ಚಿತ್ರಮಂದಿರಗಳಲ್ಲಿ ಭಜರಂಗಿ 2 ರಿಲೀಸ್ ಆಗುವ ಬಗ್ಗೆ ಸುದ್ದಿ ಕೇಳಿ ಬರುತ್ತಿದೆ.
ಸಾಮಾನ್ಯವಾಗಿ ಚಿತ್ರ ಬಿಡುಗಡೆಯಾಗಿ ಕೆಲವು ದಿನಗಳ ನಂತರ ಇತರೆ ಭಾಷೆಗಳಿಗೆ ಡಬ್ ಆಗುವುದು. ಆದರೆ ಭಜರಂಗಿ 2 ಚಿತ್ರ ಏಕಕಾಲದಲ್ಲೇ 3 ರಾಜ್ಯಗಳ 600 ಚಿತ್ರಮಂದಿರಗಳಲ್ಲಿ ರಿಲೀಸ್ ಆಗುತ್ತಿದೆ.
ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಗೆ ಜೋಡಿಯಾಗಿ ನಟಿ ಭಾವನಾ ಮೆನನ್ ಕಾಣಿಸಿಕೊಳ್ಳಲಿದ್ದು, ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತಾ ಕೊಟ್ಟಿದ್ದಾರೆ. ಭಜರಂಗಿ 2ರನ್ನು ಹರ್ಷ ಭರ್ಜರಿಯಾಗಿ ನಿರ್ದೇಶನ ಮಾಡಿದ್ದು, ಜಯಣ ನಿರ್ಮಾಣ ಮಾಡಿದ್ದಾರೆ. ಸದ್ಯ ಅ.29ಕ್ಕೆ ಚಿತ್ರ ಬಿಡುಗಡೆಯಾಗಲಿದ್ದು, ಆನಂದ್ ಆಡಿಯೋ ಮೂಲಕ ಚಿತ್ರದ ಟ್ರೈಲರ್ ರಿಲೀಸ್ ಆಗಲಿದೆ.