‘ಬಜರಂಗಿ ಭಾಯಿಜಾನ್​’ ಹಿಂದಿಕ್ಕಿದ ‘ಆರ್​ಆರ್​ಆರ್​’: ಸಾವಿರ ಕೋಟಿ ಗಡಿಯಲ್ಲಿ ರಾಜಮೌಳಿ ಸಿನಿಮಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಸಿನಿಮಾತೆರೆಗೆ ಬಂದು ಅನೇಕ ದಾಖಲೆಗಳನ್ನು ಪುಡಿಮಾಡಿದ್ದು,ಇದೀಗ ಚಿತ್ರದ ಕಲೆಕ್ಷನ್​ 1,000 ಕೋಟಿ ರೂಪಾಯಿ ಸಮೀಪಿಸಿದೆ.
ರಾಜಮೌಳಿ ಸಿನಿಮಾದ ಮೇಕಿಂಗ್​ಗೆ ಫ್ಯಾನ್ಸ್ ಫಿದಾ ಆಗಿದ್ದು, ಜ್ಯೂ.ಎನ್​ಟಿಆರ್​ ಹಾಗೂ ರಾಮ್​ ಚರಣ್​ ಅಭಿನಯದ ಈ ಚಿತ್ರ ಬಾಲಿವುಡ್​ ಅಂಗಳದಲ್ಲಿ, ವಿದೇಶದಲ್ಲಿ ಒಳ್ಳೆಯ ಕಮಾಯಿ ಮಾಡುತ್ತಿದೆ.
ಸಿನಿಮಾ ಅದ್ದೂರಿತನ ಕಂಡು ಅನೇಕರು ಮರಳಿಮರಳಿ ಚಿತ್ರಮಂದಿರಕ್ಕೆ ತೆರಳುತ್ತಿದ್ದು, ನಿಮಾ ವಿಶ್ವ ಮಟ್ಟದಲ್ಲಿ 969.2 ಕೋಟಿ ಬಾಚಿಕೊಂಡಿದೆ. ಈ ಮೂಲಕ ಹಲವು ಸಿನಿಮಾಗಳ ದಾಖಲೆಯನ್ನುಪುಡಿ ಮಾಡಿದೆ.
ಆಮಿರ್​ ನಟನೆಯ ‘ಪಿಕೆ’ ಚಿತ್ರದ ಲೈಫ್​ಟೈಮ್​ ಕಲೆಕ್ಷನ್​ 854 ಕೋಟಿ ರೂಪಾಯಿ. ಈ ಚಿತ್ರವನ್ನು ಕೆಲ ದಿನಗಳ ಹಿಂದೆಯೇ ಹಿಂದಿಕ್ಕಿತ್ತು ‘ಆರ್​ಆರ್​ಆರ್​’ ಚಿತ್ರ. ಆಮಿರ್ ಖಾನ್​ ಅಭಿನಯದ ‘ಸೀಕ್ರೆಟ್​ ಸೂಪರ್​ ಸ್ಟಾರ್​’ (966 ಕೋಟಿ ರೂಪಾಯಿ) ಹಾಗೂ ‘ಬಜರಂಗಿ ಭಾಯಿಜಾನ್’ (969 ಕೋಟಿ ರೂಪಾಯಿ) ಚಿತ್ರಗಳ ಲೈಫ್​ಟೈಮ್​ ಕಲೆಕ್ಷನ್​ ದಾಖಲೆಗಳನ್ನು ಬ್ರೇಕ್ ಮಾಡಿದೆ. ಈ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
ರಾಜಮೌಳಿ ಅವರೇ ನಿರ್ದೇಶಿಸಿರುವ ‘ಬಾಹುಬಲಿ 2’ 1,810 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಎರಡನೇ ಸ್ಥಾನದಲ್ಲಿದ್ದರೆ, ಆಮಿರ್ ಖಾನ್​ ಅಭಿನಯದ ‘ದಂಗಲ್​’ 2,024 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಮೊದಲ ಸ್ಥಾನದಲ್ಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!