Sunday, April 18, 2021

Latest Posts

ಬಹಳ ಟೇಸ್ಟಿ ಈ ಬಾಳೆ ದಿಂಡಿನ ಪಲಾವ್.. ಹೇಗೆ ಮಾಡೋದು ನೋಡಿ‌ ಈ ಈಸಿ ರೆಸಿಪಿ..

ಒಂದೇ ರೀತಿ ಪಲಾವ್ ತಿಂದು ನಿಮಗೂ ಬೋರ್ ಆಗಿರುತ್ತದೆ. ಬೇರೆ ಏನಾದ್ರೂ ಟ್ರೈ ಮಾಡೋಣ ಅಂದ್ರೆ ಹೊಸ ರೆಸಿಪಿ ಗೊತ್ತಿಲ್ಲ ಅಲ್ವಾ? ಹಾಗಾದ್ರೆ ಇಲ್ಲಿರು ಬಾಳೆ ದಿಂಡಿನ ಪಲಾವ್ ಟ್ರೈ ಮಾಡಿ.. ಇಲ್ಲಿದೆ ರೆಸಿಪಿ..

ಬೇಕಾಗುವ ಸಾಮಗ್ರಿ:

ಬಾಳೆದಿಂಡು
ಶುಂಠಿ
ಬೆಳ್ಳುಳ್ಳಿ
ಗರಂ ಮಸಾಲ
ಉಪ್ಪು
ಲಿಂಬು ರಸ
ಹಸಿ ಮೆಣಸು
ಕೊತ್ತಂಬರಿ ಸೊಪ್ಪು
ಈರುಳ್ಳಿ
ಕರಿ ಬೇವು
ಉಪ್ಪು
ಎಣ್ಣೆ
ಸಾಸಿವೆ
ಉದ್ದಿನ ಬೇಳೆ

ಮಾಡುವ ವಿಧಾನ:

  • ಮೊದಲು ಬಾಳೆದಿಂಡನ್ನು ತೊಳೆದು ಸ್ವಲ್ಪ ದೊಡ್ಡದಾಗಿ ಹೆಚ್ಚಿಕೊಂಡು ಒಂದು ಪಾತ್ರೆಗೆ ಹಾಕಿ ಅದಕ್ಕೆ ಹುಣಸೆಹಣ್ಣು ಅಥವಾ ಲಿಂಬುರಸ ಹಾಕಿ ನೀರಿನ ಜೊತೆಗೆ ಐದು ನಿಮಿಷ ನೆನೆಸಬೇಕು. ಹಾಗೆ ಮಾಡಿದಾಗ ಬಾಳೆದಿಂಡಿನ ನಾರು ಸುಲಭದಲ್ಲಿ ಬಿಡುತ್ತದೆ‌.
  • ನಂತರ ಒಂದು ಮಿಕ್ಸಿಜಾರಿಗೆ ಕಾಯಿತುರಿ, ಬೆಳ್ಳುಳ್ಳಿ, ಶುಂಠಿ, ಗರಂ ಮಸಾಲಾ, ಕೊತ್ತಂಬರಿ ಸೊಪ್ಪು, ಮೆಣಸಿನಕಾಯಿ, ನೀರು ಹಾಕಿ ರುಬ್ಬಿಟ್ಟುಕೊಳ್ಳಬೇಕು.
  • ನಂತರ ಒಂದು ಕುಕ್ಕರ್ ತೆಗೆದುಕೊಂಡು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ, ಉದ್ದಿನಬೇಳೆ, ಸಾಸಿವೆ ಕಾಳು ಬೇವಿನಸೊಪ್ಪು ಹಾಕಿ ನಂತರ ಅದಕ್ಕೆ  ಹುಳಿಯಲ್ಲಿ ಅದ್ದಿದ ಬಾಳೆದಿಂಡನ್ನು ಹಾಕಬೇಕು.
  • ನಂತರ ಅಕ್ಕಿಯನ್ನು ತೊಳೆದುಕೊಂಡು ಅದಕ್ಕೆ ಹಾಕಿ ಸ್ವಲ್ಪ ಉಪ್ಪು ಹಾಕಿ ಕೈಯ್ಯಾಡಿಸಿ ರುಬ್ಬಿಕೊಂಡ ಮಿಶ್ರಣವನ್ನು ಸೇರಿಸಬೇಕು.
  • ಅಕ್ಕಿಯ ಪ್ರಮಾಣವನ್ನು ನೋಡಿಕೊಂಡು ನೀರು ಹಾಕಿ, ಬೇಕಿದ್ದಲ್ಲಿ ಸ್ವಲ್ಪ ಉಪ್ಪು ಸೇರಿಸಿ ಕುಕ್ಕರ್ ಮುಚ್ಚಳ ಮುಚ್ಚಿ ಮೂರು ಸೀಟಿ ಹೊಡೆಸಿದರೆ ರುಚಿಕರವಾದ, ಬಾಳೆದಿಂಡಿನ ಪುಲಾವ್ ರೆಡಿ..

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss