ಹಿರಿಯ ಪತ್ರಕರ್ತ ಬಾಳೇಪುಣಿ ಸೇರಿದಂತೆ ನಾಲ್ಕು ಮಂದಿಗೆ ವಿ.ಎಸ್.ಕೆ. ಮಾಧ್ಯಮ ಪ್ರಶಸ್ತಿ

ಹೊಸ ದಿಗಂತ ವರದಿ, ಮಂಗಳೂರು :

ಮಾಧ್ಯಮ ಸಂವಹನ ಸಂಸ್ಥೆಯಾದ ವಿಶ್ವ ಸಂವಾದ ಕೇಂದ್ರ, ಕರ್ನಾಟಕದ ವತಿಯಿಂದ ನೀಡಲಾಗುವ ಈ ವರ್ಷದ ವಿ.ಎಸ್.ಕೆ ಮಾಧ್ಯಮ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದ್ದು, `ಹೊಸ ದಿಗಂತ’ ಕನ್ನಡ ದೈನಿಕದ ಮಂಗಳೂರು ಆವೃತ್ತಿಯ ವಿಶೇಷ ವರದಿಗಾರ ಗುರುವಪ್ಪ ಎನ್.ಟಿ.ಬಾಳೇಪುಣಿ ಸೇರಿದಂತೆ ನಾಲ್ಕು ಮಂದಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಬಾಳೇಪುಣಿಯವರಿಗೆ `ಬೆ.ಸು.ನಾ ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ’ ಹೊಸ ದಿಗಂತ ನಿವೃತ್ತ ಸಂಪಾದಕ, ಅಂಕಣಕಾರ ದು.ಗು.ಲಕ್ಷ್ಮಣ ಅವರಿಗೆ `ಹೊ.ವೆ.ಶೇಷಾದ್ರಿ ಅಂಕಣಕಾರ ಪ್ರಶಸ್ತಿ’, ಚೀ.ಜ.ರಾಜೀವ ಅವರಿಗೆ `ತಿ.ತಾ.ಶರ್ಮ ಪತ್ರಿಕೋದ್ಯಮ ಪ್ರಶಸ್ತಿ’ ಹಾಗೂ ಡಾ.ಎಚ್.ಎಸ್.ಪ್ರೇಮಾ ಅವವರು `ವಿ.ಎಸ್.ಕೆ.ಡಿಜಿಟಲ್ ಮಾಧ್ಯಮ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ವಿ.ಎಸ್.ಕೆ.ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ಜೂ.26ರಂದು ಪೂರ್ವಾಹ್ನ 10.30ಕ್ಕೆ ಬೆಂಗಳೂರಿನ ಬಸವನಗುಡಿಯ ಬಿಎಂಎಸ್ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಆರೆಸ್ಸೆಸ್ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್, ಪ್ರಜ್ಞಾ ಪ್ರವಾಹದ ಕ್ಷೇತ್ರೀಯ ಸಂಯೋಜಕ ರಘುನಂದನ್ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಾಳೇಪುಣಿ ಅವರಿಗೆ ಇತ್ತೀಚೆಗಷ್ಟೇ ರಾಜ್ಯ ಸರಕಾರ , ರಾಜ್ಯಮಟ್ಟದ ಪ್ರತಿಷ್ಠಿತ `ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ’ ನೀಡಿ ಗೌರವಿಸಿತ್ತು. ಅಲ್ಲದೆ 2011ರಲ್ಲಿ ರಾಷ್ಟ್ರಮಟ್ಟದ ಸರೋಜಿನಿ ನಾಯ್ಡು ಪ್ರಶಸ್ತಿ, 2004ರಲ್ಲಿ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ, 2014ರಲ್ಲಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2012ರಲ್ಲಿ ಕಾಂತಾವರ ಪುರಸ್ಕಾರ ದೊರೆತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!