ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಜಮ್ಮು-ಕಾಶ್ಮೀರದಲ್ಲಿ ಪಿಐಎ (ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ಲೈನ್ಸ್) ಪ್ರಿಂಟೆಂಡ್ ಆಕಾರದ ಏರೋಪ್ಲೇನ್ ಆಕೃತಿಯಲ್ಲಿರುವ ಬಲೂನ್ ಒಂದು ಪತ್ತೆಯಾಗಿದೆ.
ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಹೀರಾನಗರ ಸೆಕ್ಟರ್ನ ಸೋಟ್ರಾ ಚಕ್ ಗ್ರಾಮದಲ್ಲಿ ಈ ಬಲೂನ್ ಪತ್ತೆಯಾಗಿದೆ. ವಿಷಯ ತಿಳಿದ ಕೂಡಲೇ ಪೊಲೀಸ್ ಅಧಿಕಾರಿಗಳು ಬಲೂನ್ ಅನ್ನ ಸೀಜ್ ಮಾಡಿದ್ದಾರೆ.
ಶಾಂತಿ ಕದಡುವ ಬಲೂನ್ ಕಂಡ ಕೂಡಲೇ ಪೊಲೀಸರಿಗೆ ಅಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಕೂಡಲೇ ರಾಜ್ಭಾಗ್ ಪೊಲೀಸರು ಸ್ಥಳಕ್ಕೆ ಬಂದು ಅದನ್ನ ಸೀಜ್ ಮಾಡಿದ್ದಾರೆ. ಸದ್ಯ ಬಲೂನ್ಗೆ ಸಂಬಂಧಿಸಿ ತನಿಖೆ ಮುಂದುವರಿದಿದೆ ಅಂತಾ ವರದಿಯಾಗಿದೆ.
ಇದು ಮಕ್ಕಳಾಡುವ ವಿಮಾನ ಮಾದರಿಯ ಬಲೂನೋ ಅಥವಾ ನಿಜವಾಗಿಯೂ ಪಾಕಿಸ್ತಾನದ ಗುಪ್ತಚರ ಇಲಾಖೆಯ ಕುತಂತ್ರವೋ ಎಂಬುದನ್ನು ಶೀಘ್ರದಲ್ಲೇ ಪತ್ತೆ ಹಚ್ಚಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.