ಶಾಲಾ ಆವರಣದಲ್ಲಿ ಕ್ಯಾಮೆರಾ, ವಿಡಿಯೋಗೆ ಬ್ರೇಕ್: ಶಾಲಾ ಮಕ್ಕಳ ಸುರಕ್ಷತೆಗೆ ಗುಜರಾತ್ ಸರ್ಕಾರದ ಬಿಗಿ ಕ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್: ಶಾಲಾ ಮಕ್ಕಳ ಸುರಕ್ಷತೆಯನ್ನು ಹೆಚ್ಚಿಸಲು, ಅವರ ಖಾಸಗಿತನವನ್ನು ಕಾಪಾಡಲು ಮತ್ತು ಶೈಕ್ಷಣಿಕ ವಾತಾವರಣವನ್ನು ಸುಸ್ಥಿತಿಯಲ್ಲಿಡಲು ಗುಜರಾತ್ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ರಾಜ್ಯದಲ್ಲಿರುವ ಶಾಲೆಗಳಿಗೆ ಅಪರಿಚಿತರ ಪ್ರವೇಶವನ್ನು ತಡೆಯಲು ಮತ್ತು ವಿದ್ಯಾರ್ಥಿಗಳ ಅನುಮತಿಯಿಲ್ಲದ ಫೋಟೋ, ವಿಡಿಯೋ ಚಿತ್ರೀಕರಣವನ್ನು ನಿಷೇಧಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಶಾಲಾ ಆಯುಕ್ತರ ಕಚೇರಿ ಹೊರಡಿಸಿರುವ ಸುತ್ತೋಲೆಯ ಪ್ರಕಾರ, ಯಾವುದೇ ಹೊರಗಿನ ವ್ಯಕ್ತಿ ಶಾಲಾ ಆವರಣಕ್ಕೆ ಪ್ರವೇಶಿಸಬೇಕಾದರೆ ಶಾಲೆಯ ಮುಖ್ಯೋಪಾಧ್ಯಾಯರು ಅಥವಾ ಪ್ರಿನ್ಸಿಪಾಲ್‌ಗಳಿಂದ ಕಡ್ಡಾಯವಾಗಿ ಲಿಖಿತ ಅನುಮತಿ ಪಡೆಯಬೇಕು. … Continue reading ಶಾಲಾ ಆವರಣದಲ್ಲಿ ಕ್ಯಾಮೆರಾ, ವಿಡಿಯೋಗೆ ಬ್ರೇಕ್: ಶಾಲಾ ಮಕ್ಕಳ ಸುರಕ್ಷತೆಗೆ ಗುಜರಾತ್ ಸರ್ಕಾರದ ಬಿಗಿ ಕ್ರಮ