Monday, March 4, 2024

ಈ ರಾಜ್ಯದಲ್ಲಿ ಇನ್ಮುಂದೆ ‘ಸಕ್ಕರೆ ಮಿಠಾಯಿ’ ಬ್ಯಾನ್, ಅಂಥದ್ದೇನಿದೆ ಅದರಲ್ಲಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲ್ಲ ವಯಸ್ಸಿನವರಿಗೂ ಸಕ್ಕರೆ ಮಿಠಾಯಿ ಇಷ್ಟ. ಅಪರೂಪಕ್ಕೆ ಕಾಟನ್ ಕ್ಯಾಂಡಿ ಕಾಣಿಸಿದರೆ ತಿನ್ನದೆ ಬಿಡೋರಿಲ್ಲ. ಸಕ್ಕರೆ ಮಿಠಾಯಿಯನ್ನು ಪುದುಚೆರಿ ಸರ್ಕಾರ ಬ್ಯಾನ್ ಮಾಡಿದೆ.

ಆರೋಗ್ಯಕ್ಕೆ ಹಾನಿ ತರುವ ರೊಡಮೈನ್-ಬಿ ಎನ್ನುವ ಅಂಶ ಸಕ್ಕರೆ ಮಿಠಾಯಿಯಲ್ಲಿ ಇರುವ ಕಾರಣ ಇದನ್ನು ಬ್ಯಾನ್ ಮಾಡಲಾಗಿದೆ. ಆಹಾರ ಸುರಕ್ಷತಾ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದು, ಮನುಷ್ಯನ ದೇಹದ ಮೇಲೆ ರೊಡಮೈನ್-ಬಿ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ, ಗಂಭೀರ ಆರೋಗ್ಯ ಸಮಸ್ಯೆಗಳನ್ನು ತರುತ್ತದೆ ಎಂದು ಹೇಳಲಾಗಿದೆ.

ಲೆಫ್ಟಿನೆಂಟ್ ಗವರ್ನರ್ ತಮಿಳ್‌ಸಾಯಿ ಸುಂದರ್‌ರಾಜನ್ ರಾಜ್ಯಾದ್ಯಂತ ಬಾಂಬೆ ಮಿಠಾಯಿ ನಿಷೇಧ ಮಾಡಿ ಆದೇಶ ಹೊರಡಿಸಿದ್ದಾರೆ. ಇನ್ನು ರೊಮೈನ್-ಬಿ ಅಂಶ ಇಲ್ಲದ, ಆಹಾರ ಸುರಕ್ಷತಾ ಇಲಾಖೆಯಿಂದ ಗುಣಮಟ್ಟದ ಪ್ರಮಾಣ ಪತ್ರ ಪಡೆದ ಮಾರಾಟಗಾರರು ಕಾಟನ್ ಕ್ಯಾಂಡಿ ಮಾರಬಹುದು.

ಆದೇಶ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ. ರೋಡಮೈನ್ ಬಿ ಜೀವಕೋಶಗಳು ಹಾಗೂ ಅಂಗಾಂಗಗಳ ಮೇಲೆ ಆಕ್ಸಿಡೇಟಿವ್ ಒತ್ತಡ ನೀಡುತ್ತದೆ. ಆಹಾರದೊಂದಿಗೆ ಬೆರೆತಾಗ ಇದು ವಿಷವಾಗಿ ಪರಿವರ್ತನೆ ಆಗಿ ಯಕೃತ್ ಹಾನಿ, ಗೆಡ್ಡೆಗಳು ಮತ್ತು ಕ್ಯಾನ್ಸರ್‌ಗೆ ಕಾರಣವಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!