ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಆಸ್ಟ್ರೇಲಿಯಾದ ಕ್ವೀನ್ಸ್ ಲ್ಯಾಂಡ್ ನಲ್ಲಿ ಬಾಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ತಲೆ ಮೇಲೆ 70 ಕೆಜಿ ತೂಕದ ಬಾಳೆ ಗೊನೆ ಹಾಗೂ ಗಿಡದ ತುದಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಈ ಪ್ರಕರಣ ನ್ಯಾಯಾಲಯ ಮೆಟ್ಟಿಲನ್ನು ಹತ್ತಿತ್ತು. ಕೊನೆಗೆ ಸಂತ್ರಸ್ತರಿಗೆ ಬರೋಬ್ಬರಿ 4 ಕೋಟಿ ಪರಿಹಾರ ನೀಡುವಂತೆ ಆದೇಶಿಸಿದೆ.
2016 ರಲ್ಲಿಲಾಂಗ್ಬಾಟಮ್ ಎಂಬ 30 ವರ್ಷದ ವ್ಯಕ್ತಿ ಕ್ವೀನ್ಸ್ಲ್ಯಾಂಡ್ನ ಕುಕ್ಟೌನ್ ಬಳಿಯ ಎಲ್ & ಆರ್ ಕಾಲಿನ್ಸ್ನ ಬಾಳೆ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ. ಆಗ ಇದ್ದಕ್ಕಿದ್ದಂತೆ ಬಾಳೆ ಗಿಡ ಹಾಗೂ ಅದರಲಲ್ಲಿದ್ದ ಬಾನೆ ಗೊನೆ ತುಂಡಾಗಿ ಅವರ ಮೇಲೆ ಬಿದ್ದಿದೆ. ಇದರಿಂದಾಗಿ ಅವರು ಗಂಭೀರವಾಗಿ ಗಾಯಗೊಂಡು ಅಂಗವಿಕಲರಾದರು. ಪರಿಣಾಮವಾಗಿ ಕೆಲಸ ಮಾಡಲು ಸಾಧ್ಯವಾಗದೇ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಆಗ ಅವರು ನ್ಯಾಯಾಲಯದಲ್ಲಿ ಸುಮಾರು $ 502,740 ರಷ್ಟು ಮೊತ್ತದ ನಷ್ಟ ಪರಿಹಾರಕ್ಕಾಗಿ ಮೊಕದ್ದಮೆ ಹೂಡಿದ್ದರು.
ಪ್ರಕರಣದಲ್ಲಿ ಲಾಂಗ್ ಬಾಟಮ್ ತೋಟದ ಮಾಲಿಕರನ್ನು ತಪ್ಪಿತಸ್ಥರನ್ನಾಗಿ ಮಾಡಿದ್ದರು. ಬಾಳೆ ಗಿಡವನ್ನು ಕತ್ತರಿಸುವಾಗ ಕತ್ತರಿಸುವ ವ್ಯಕ್ತಿ ಮುಂಜಾಗ್ರತೆ ವಹಿಸಲಿಲ್ಲ. ಮತ್ತು ಬೀಳುವ ಮುನ್ನ ಮುನ್ನೆಚ್ಚರಿಕೆ ನೀಡಲಿಲ್ಲ. ತನ್ನದಲ್ಲದ ತಪ್ಪಿಗೆ ಬೆಲೆ ತೆರಬೇಕಾಗಿದೆ ಎಂದು ವಾದಿಸಿದ್ದರು. ತೋಟದ ಮಾಲಿಕರು ಮತ್ತೊಬ್ಬ ಕೆಲಸಗಾರ ತುರಾತುರಿಯಲ್ಲಿ ಗಿಡ ಕತ್ತರಿಸಿದ್ದು ತನ್ನ ತಪ್ಪಲ್ಲ. ಜೊತೆಗೆ ಲಾಂಗ್ ಬಾಟಮ್ ಅವರೇ ಜಾಗರೂಕರಾಗಿರಬೇಕಿತ್ತು ಎಂದು ವಾದಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆದು ಇತ್ತೀಚೆಗೆ ತೀರ್ಪು ನೀಡಲಾಗಿದೆ. ಅದರಲ್ಲಿ ನ್ಯಾಯಾಲಯವು ಮಾಲಿಕರ ನಿರ್ಲಕ್ಷ್ಯವನ್ನು ಪ್ರಶ್ನಿಸಿದೆ. ಜೊತೆಗೆ ನೈಪುಣ್ಯವಿಲ್ಲದ ಕೆಲಸಗಾರ ಏಕಾಏಕಿ ಗಿಡ ಕತ್ತರಿಸಿದ್ದು, ಲಾಂಗ್ ಬಾಟಮ್ ಅವರಿಗೆ ಹಾನಿಯಾಗಲು ಪ್ರಮುಖ ಕಾರಣ ಎಂದು ಅಭಿಪ್ರಾಯಪಟ್ಟಿದೆ.
ಕೆಲಸಗಾರನೋರ್ವನ ಜೀವನ ಪರ್ಯಂತ ಕೆಲಸ ನಷ್ಟವಾಗಿದ್ದಕ್ಕಾಗಿ ಪರಿಹಾರ ನೀಡಲು ಆದೇಶಿಸಿದೆ. ಇದರ ಅನ್ವಯ ಸಂತ್ರಸ್ತ ವ್ಯಕ್ತಿಗೆ $ 502,740 ಪರಿಹಾರವನ್ನು (ಭಾರತೀಯ ಕರೆನ್ಸಿಯಲ್ಲಿ 4.19 ಕೋಟಿ) ಪಾವತಿಸುವಂತೆ ಆದೇಶಿಸಿದೆ.