ಇವತ್ತು ಬಾಳೆಹಣ್ಣಿನ ಕೇಸರಿಬಾತ್‌ ಮಾಡಿ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೇಸರಿಬಾತ್ ಮಾಡುವ ವಿಧಾನ ಎಲ್ಲರಿಗೂ ಗೊತ್ತೇ ಇದೆ. ಆದರೆ ಅದರಲ್ಲಿ ಕೆಲ ಸಣ್ಣ ಬದಲಾವಣೆಗಳ ಮೂಲಕ ಬಾಳೆಹಣ್ಣು ಉಪಯೋಗಿಇ ಮಾಡುವ ಕೇಸರಿಬಾತ್‌ ಅದ್ಭುತವಾಗಿರುತ್ತೆ. ಅದರ ವಿಧಾನ ತಿಳಿಯೋಣ ಬನ್ನಿ.

ಬೇಕಾಗುವ ಸಾಮಗ್ರಿ:
ತುಪ್ಪ – 5 ದೊಡ್ಡ ಚಮಚ
ಗೋಡಂಬಿ ಚೂರು – 2 ದೊಡ್ಡ ಚಮಚ
ಒಣದ್ರಾಕ್ಷಿ – 2 ದೊಡ್ಡ ಚಮಚ
ರವೆ – ಅರ್ಧ ಕಪ್
ಮಾಗಿದ ಬಾಳೆಹಣ್ಣು – 2
ಬಿಸಿನೀರು – ಒಂದು ಕಾಲು ಕಪ್
ಸಕ್ಕರೆ – ಅರ್ಧ ಕಪ್
ಕೇಸರಿ, ಬಿಸಿ ನೀರಿನಲ್ಲಿ ನೆನೆಸಿದ್ದು – ಅರ್ಧ ಚಮಚ
ಏಲಕ್ಕಿ ಪುಡಿ – ಅರ್ಧ ಚಮಚ
ಮಾಡುವ ವಿಧಾನ:
ಬಾಣಲೆಯಲ್ಲಿ ೧ ದೊಡ್ಡ ಚಮಚ ತುಪ್ಪ ಬಿಸಿ ಮಾಡಿ ಅದಕ್ಕೆ ಗೋಡಂಬಿ ಚೂರು ಹಾಗೂ ದ್ರಾಕ್ಷಿ ಹಾಕಿ ಚೆನ್ನಾಗಿ ಹುರಿದು ತೆಗೆದಿಡಿ. ಅದೇ ಬಾಣಲೆಗೆ ಉಳಿದ ತುಪ್ಪಕ್ಕೆ ಅರ್ಧ ಕಪ್ ಆಗುವಷ್ಟು ಉಪ್ಪಿಟ್ಟು ರವೆ ಅಥವಾ ಚಿರೋಟಿ ರವೆ ಹಾಕಿ ಸಣ್ಣ ಉರಿಯಲ್ಲಿ ೪ ರಿಂದ ೫ ನಿಮಿಷಗಳವರೆಗೆ ಚೆನ್ನಾಗಿ ಹುರಿಯಿರಿ. ಚೆನ್ನಾಗಿ ಹುರಿದ ರವೆಯನ್ನು ಬಾಣಲೆಯಿಂದ ಒಂದು ತಟ್ಟೆಗೆ ಹಾಕಿಡಿ. ಒಂದು ಪ್ರತ್ಯೇಕ ಕಪ್ನಲ್ಲಿ  ಚೆನ್ನಾಗಿ ಮಾಗಿದ ಎರಡು ಬಾಳೆಹಣ್ಣನ್ನು ತೆಗೆದುಕೊಂಡು ಸಿಪ್ಪೆ ತೆಗೆದು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ನಂತರ ಅದೇ ಬಾಣಲೆಗೆ  ಬಾಳೆಹಣ್ಣಿನ ಪೇಸ್ಟ್ ಹಾಕಿ ಮೇಲೆ ಒಂದು ಕಾಲು ಕಪ್ ಆಗುವಷ್ಟು ಕುದಿಯುತ್ತಿರುವ ಬಿಸಿ ನೀರನ್ನು ಹಾಕಿ ಚೆನ್ನಾಗಿ ಕಲಕಿ. ಒಂದು ಕುದಿ ಬಂದ ಮೇಲೆ  ತೆಗೆದಿಟ್ಟ ರವೆಯನ್ನು ಸ್ವಲ್ಪ ಸ್ವಲ್ಪವೇ ಹಾಕಿ ಗಂಟು ಬೀಳದಂತೆ ನೋಡಿಕೊಳ್ಳಿ.ನಂತರ ಅರ್ಧ ಕಪ್ ಸಕ್ಕರೆ ಹಾಗು ೩ ದೊಡ್ಡ ಚಮಚ ಆಗುವಷ್ಟು ತುಪ್ಪ ಹಾಕಿ ಚೆನ್ನಾಗಿ ಕಲಸಿ. ರವೆಯಿಂದ ತುಪ್ಪ ಬೇರ್ಪಡುವವರೆಗೂ ತಿರುವಿದರೆ ಕೇಸರಿಬಾತ್‌ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!