ಬೆಂಗಳೂರು-ಅಮೆರಿಕ ಏರ್ ಇಂಡಿಯಾ ವಿಮಾನ ಭಾರೀ ವಿಳಂಬ, ಕಾದು ಕಾದು ಸುಸ್ತಾದ ಪ್ರಯಾಣಿಕರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ತೆರಳಬೇಕಿದ್ದ ವಿಮಾನ 13 ಗಂಟೆ ವಿಳಂಬವಾಗಿದ್ದು, ಪ್ರಯಾಣಿಕರು ಕಾದು ಕಾದು ಸುಸ್ತಾಗಿದ್ದಾರೆ.

206 ಪ್ರಯಾಣಿಕರು ಈ ವಿಮಾನದಲ್ಲಿ ಟ್ರಾವೆಲ್ ಮಾಡಬೇಕಿತ್ತು. ತಾಂತ್ರಿಕ ಸಮಸ್ಯೆಯಿಂದಾಗಿ ವಿಮಾನ ವಿಳಂಬವಾಗಿದ್ದು, ಪ್ರಯಾಣಿಕರಿಗೆ ತೊಂದರೆಯಾಗಿದೆ.

ಮಧ್ಯಾಹ್ನ 2:20ಕ್ಕೆ ಹೊರಡಬೇಕಿದ್ದ ವಿಮಾನ ಮಧ್ಯರಾತ್ರಿ 1:20ಕ್ಕೆ ಹೊರಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, 14  ಗಂಟೆ ತಡವಾಗಿ ವಿಮಾನ ಬಂದಿದೆ. ನಾನು ಮನೆಗೆ ಹೋಗುವ ನಿರ್ಧಾರ ಮಾಡಿದ್ದೆ. ಮರುದಿನವೂ ನನಗೆ ಬೇಕಾದ ಟಿಕೆಟ್ ಸಿಗಲಿಲ್ಲ. ಏರ್ ಇಂಡಿಯಾ ವಿಶ್ವಾಸಾರ್ಹ ಅಲ್ಲ ಎಂದು ಹೇಳಿದ್ದಾರೆ.

ವಿಳಂಬದ ವೇಳೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ನೀಡಲಾಗಿದೆ. ಊಟ, ಉಪಹಾರ ನೀಡಿದ್ದೇವೆ, ತಾಂತ್ರಿಕ ದೋಷದಿಂದ ಕಾಯುವ ಪರಿಸ್ಥಿತಿ ಬಂದಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!