spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

2ಎ ಮೀಸಲಾತಿ ಅನ್ಯಾಯದ ವಿರುದ್ಧ ಸೆ.20ರಂದು ಬೆಂಗಳೂರು ಚಲೋ ಕಾಯಕ ಸಮಾಜಗಳ ಒಕ್ಕೂಟ ನೇತೃತ್ವ

- Advertisement -Nitte

ಹೊಸ ದಿಗಂತ ವರದಿ ಮಡಿಕೇರಿ:

ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ ‘2ಎ’ಯಡಿಯಲ್ಲಿ ಮೀಸಲಾತಿ ನೀಡಿದಲ್ಲಿ, ಈ ವರ್ಗದಡಿ ಈಗಾಗಲೇ ಇರುವ ಸುಮಾರು 102 ಜಾತಿ ಜನಾಂಗಗಳಿಗೆ ಅನ್ಯಾಯವಾಗಲಿದೆ ಎಂದು ಕೊಡಗು ಕಾಯಕ ಸಮಾಜಗಳ ಒಕ್ಕೂಟದ ಉಸ್ತುವಾರಿ ಟಿ.ಎಲ್ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ 2ಎ ಅಡಿಯಲ್ಲಿ ಇದುವರೆಗೂ 102 ಜಾತಿ ಜನಾಂಗಗಳು ಶೇ.15ರಷ್ಟು ಮೀಸಲಾತಿ ಸೌಲಭ್ಯ ಹೊಂದಿವೆ. ಆದರೆ,ಇದೀಗ ರಾಜ್ಯದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ,ರಾಜಕೀಯವಾಗಿ ಪ್ರಬಲರಾಗಿರುವ ಪಂಚಮಸಾಲಿಗಳು ‘2ಎ ಮೀಸಲಾತಿ ಕೊಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಒಂದೊಮ್ಮೆ ರಾಜ್ಯ ಸರ್ಕಾರ ಪಂಚಮಸಾಲಿ ಜನಾಂಗಕ್ಕೆ 2ಎ ಮೀಸಲಾತಿ ನೀಡಿದ್ದೇ ಆದಲ್ಲಿ 102 ಶೋಷಿತ ಸಮಾಜಗಳಿಗೆ ತೀವ್ರ ಅನ್ಯಾಯವಾಗಲಿದೆ ಎಂದು ಅವರು ಗೋಣಿಕೊಪ್ಪದಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಇದೀಗ, ಪಂಚಮಸಾಲಿಗಳಿಗೆ 2ಎ ಮೀಸಲಾತಿ ನೀಡುವುದರ ವಿರುದ್ಧ ಸೆ.20ರಂದು ಸುಮಾರು 21 ಸಮುದಾಯವನ್ನೊಳಗೊಂಡ ರಾಜ್ಯ ಕಾಯಕ ಸಮಾಜಗಳ ಒಕ್ಕೂಟದ ರಾಜ್ಯಾಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ಧಶೆಟ್ಟಿ ಅವರ ನೇತೃತ್ವದಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ಸಮೀಪದ ಮೌರ್ಯ ವೃತ್ತದ ಮುಂಭಾಗ ಗಾಂಧಿ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಎಲ್ಲೆಡೆಯಿಂದ 2ಎ ಗೆ ಒಳಪಡುವ ಶೋಷಿತ ಸಮಾಜ ಬಾಂಧವರು ಧರಣಿಯಲ್ಲಿ ಸ್ವಯಂಪ್ರೇರಿತರಾಗಿ ಪಾಲ್ಗೊಳ್ಳುವಂತೆ ಶ್ರೀನಿವಾಸ್ ಅವರು ಕರೆ ನೀಡಿದರು.
ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್‌ಪಂತ್ ಅವರಿಂದ ಈಗಾಗಲೇ ಶಾಂತಿಯುವ ಪ್ರತಿಭಟನೆಗೆ ಅನುಮತಿ ಹೊಂದಲಾಗಿದ್ದು, ಬಳಿಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
ಕಾಯಕ ಸಮಾಜಗಳ ಒಕ್ಕೂಟದ ಮೂಲಕ ಈಗಾಗಲೇ ವಿಶ್ವಕರ್ಮ, ಕುಂಬಾರ, ಮಡಿವಾಳ, ನಯನಜಾ ಕ್ಷತ್ರೀಯ, ಕೊರಮ, ಕೊರಚ, ಬೋವಿ ಗಾಣಿಗ, ಉಪ್ಪಾರ, ದೇವಾಂಗ, ಬಲಿಜಿಗ, ಈಡಿಗ, ಮೇದ, ಹೂವಾಡಿಗ, ಗೆಜ್ಜೆಗಾರ, ದೊಂಬಿದಾಸ, ಗೊಲ್ಲ, ಹಕ್ಕಿ ಫಿಕ್ಕೆ, ಗೊಂದಾಳಿ, ಬುಡಕಟ್ಟು ಸಮಾಜ ಹಾಗೂ ರಾಯ ರವತ್ ಇತರೆ ಸಣ್ಣಪುಟ್ಟ ಸಮಾಜಗಳನ್ನು ಸೇರಿಸಿ ಕಾಯಕ ಸಮಾಜ ಒಕ್ಕೂಟ ರಚಿಸಲಾಗಿದ್ದು, ಮುಂದೆ ಕೊಡಗು ಜಿಲ್ಲಾ ಸಮಿತಿ ರಚನೆ ಮಾಡಲಾಗುವದು ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
ಸೆ.20 ರಂದು ಈ ಮೇಲಿನ ಸಮಾಜ ಬಂಧುಗಳು ಸ್ವಯಂಪ್ರೇರಿತರಾಗಿ ಬೆಂಗಳೂರಿಗೆ ಬೆಳಗ್ಗೆ 10.30 ಗಂಟೆಗೂ ಮುನ್ನ ತಲುಪುವಂತೆ ಮನವಿ ಮಾಡಿರುವ ಅವರು, ಅಂದು ಮಧ್ಯಾಹ್ನ 1 ಗಂಟೆಯವರೆಗೆ ಧರಣಿ, ಭೋಜನ ವಿರಾಮದ ಬಳಿಕ ಸ್ಥಳೀಯ ಸಭಾಂಗಣದಲ್ಲಿ ರಾಜ್ಯಾಧ್ಯಕ್ಷ ಕೆ.ಸಿ.ಪುಟ್ಟಸಿದ್ಧೇಗೌಡರು, ಪ್ರಧಾನ ಕಾರ್ಯದರ್ಶಿ ಬೋರಪ್ಪ ಗೌಡರಿಂದ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಪ್ರತಿಭಟನಾಕಾರರನ್ನುದ್ಧೇಶಿಸಿ ಭಾಷಣ, ನಂತರ ಮುಖ್ಯಮಂತ್ರಿಗಳ ಬಳಿಗೆ ನಿಯೋಗದ ಮೂಲಕ ತೆರಳಿ ಮನವಿಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 2ಎ ಮೀಸಲಾತಿ ಅಡಿಯಲ್ಲಿ ಬರುವ ಜನಾಂಗಸವರು ಹೆಚ್ಚಿನ ವಿವರಗಳಿಗೆ 9945454133 ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆಯಬಹುದೆಂದು ಶ್ರೀನಿವಾಸ್ ಹೇಳಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss