ಬೆಂಗಳೂರು ಜಿ 20 ಸಭೆ: ಭಾರತದ ಹಣಕಾಸು ಅಜೆಂಡಾಗಳಿಗೆ ಒಮ್ಮತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಲ್ಲಿ ನಡೆದ ಜಿ20 ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರ ನಿಯೋಗ, ಕೇಂದ್ರೀಯ ಬ್ಯಾಂಕ್‌ಗಳ ಗವರ್ನರ್‌ಗಳ ನಿಯೋಗದ ಸಭೆಯಲ್ಲಿ ಭಾರತದ ಅಧ್ಯಕ್ಷ ಸ್ಥಾನಕ್ಕೆ ಮತ್ತು ಹಣಕಾಸು ಅಜೆಂಡಾಗಳಿಗೆ ಒಮ್ಮತದ ಬೆಂಬಲ ದೊರಕಿದೆ.

ದೇವನಹಳ್ಳಿಯ ಪ್ರೆಸ್ಟೀಜ್ ಗಾಲ್ಫ್‌ಶೈರ್ ಹೊಟೇಲ್‌ನಲ್ಲಿ ಮೂರು ದಿನಗಳು ನಡೆದ ಸಭೆಯಲ್ಲಿ ಜಾಗತಿಕ ಆರ್ಥಿಕ ಸವಾಲುಗಳು, ಕಂಡುಕೊಳ್ಳಬೇಕಾದ ಪರಿಹಾರದ ಬಗ್ಗೆ ಸಮಾಲೋಚನೆ ನಡೆಸಲಾಯಿತು.

ಭಾರತ ಜಿ20 ಅಧ್ಯಕ್ಷತೆ ವಹಿಸಿಕೊಂಡ ನಂತರ ನಡೆದ ಮೊದಲ ಸಭೆ ಇದಾಗಿದೆ. ಸಭೆಯಲ್ಲಿ ಹಣದುಬ್ಬರ, ಜಾಗತಿಕ ಆರ್ಥಿಕ ಸವಾಲುಗಳು, ಆಹಾರ ಮತ್ತು ಇಂಧನ ಅಭದ್ರತೆ ಬಗ್ಗೆ ಚರ್ಚೆ ನಡೆಸಲಾಯಿತು.

ಭವಿಷ್ಯದ ನಗರಗಳಿಗೆ ಹಣಕಾಸು ನೆರವು ನೀಡುವುದು, ಅವುಗಳನ್ನು ಸಬಲ ನಗರಗಳನ್ನಾಗಿ ರೂಪಿಸಲು ಮೂಲಸೌಕರ್ಯ ಕಲ್ಪಿಸುವ ಬಗ್ಗೆ ಸಮಾಲೋಚನೆ ನಡೆಸಲಾಂಗಿದೆ. ಜಾಗತಿಕ ಮಟ್ಟದಲ್ಲಿ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸುವುದಕ್ಕೆ ಎಲ್ಲ ಸದಸ್ಯರು ಒಮ್ಮತ ಸೂಚಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!