10 ಕಿ.ಮೀ ಪ್ರಯಾಣಕ್ಕೆ 29 ನಿಮಿಷ: ನಿಧಾನ ಸಂಚಾರದ ನಗರಗಳ ಪೈಕಿ ಬೆಂಗಳೂರಿಗೆ ವಿಶ್ವದಲ್ಲೇ ಎರಡನೇ ಸ್ಥಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸಿಲಿಕಾನ್‌ ಸಿಟಿ ಅಂದ್ರೆ ಮೊದಲು ನೆನಪಾಗೋದೇ ಟ್ರಾಫಿಕ್. ಇತ್ತೀಚಿನ ವರದಿಯೊಂದರ ಪ್ರಕಾರ ನಿಧಾನ ಸಂಚಾರದ ನಗರಗಳ ಪೈಕಿ ಲಂಡನ್‌ ನಂತರ ಬೆಂಗಳೂರು ವಿಶ್ವದಲ್ಲೇ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಡಚ್ ಲೊಕೇಶನ್ ಟೆಕ್ನಾಲಜಿ ಸ್ಪೆಷಲಿಸ್ಟ್ ಟಾಮ್ಟಾಮ್ ಪ್ರಕಟಿಸಿದ ಸಂಚಾರ ಸೂಚ್ಯಂಕದ ಪ್ರಕಾರ, 2022 ರಲ್ಲಿ ಬೆಂಗಳೂರಿನಲ್ಲಿ 10 ಕಿಲೋಮೀಟರ್ ಪ್ರಯಾಣ ಮಾಡಲು ಸುಮಾರು ಅರ್ಧ ಗಂಟೆ ಸಮಯ ಬೇಕು. ಹಾಗಾಗಿ ಬೆಂಗಳೂರು ವಿಶ್ವದ ಎರಡನೇ ನಿಧಾನಗತಿಯ ನಗರ ಎಂದು ಹೇಳಿದೆ.

ಡಬ್ಲಿನ್, ಐರ್ಲೆಂಡ್ ಮತ್ತು ಜಪಾನ್‌ನ ಸಪ್ಪೊರೊ ಕ್ರಮವಾಗಿ 28 ನಿಮಿಷಗಳು ಮತ್ತು 30 ಸೆಕೆಂಡುಗಳು ಮತ್ತು 27 ನಿಮಿಷಗಳು ಮತ್ತು 40 ಸೆಕೆಂಡುಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿವೆ.

2021ರಲ್ಲಿ ಬೆಂಗಳೂರು ನಗರ ಪ್ರದೇಶದಲ್ಲಿ ಸಂಚರಿಸುವಾಗ ಪ್ರತಿ ಗಂಟೆಗೆ 14 ಕಿಲೋ ಮೀಟರ್ ವೇಗ ಇದ್ದರೆ, 2022ರಲ್ಲಿ ಈ ಪ್ರಮಾಣವು 18 ಕಿಲೋ ಮೀಟರ್ ಆಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ನಗರ ಎಂಬ ಕುಖ್ಯಾತಿಗೆ ಲಂಡನ್ ಹೆಸರಿಸಲಾಗಿದೆ. ಲಂಡನ್​ನಲ್ಲಿ 10 ಕಿಲೋ ಮೀಟರ್ ಪ್ರಯಾಣ ಮಾಡಲು 36 ನಿಮಿಷ, 20 ಸೆಕೆಂಡುಗಳು ಬೇಕಾಗುತ್ತದೆ.

ಭಾರತದ ಇತರ ನಗರಗಳನ್ನು ನೋಡುವುದಾದರೆ ಪುಣೆ 6ನೇ ಸ್ಥಾನದಲ್ಲಿದೆ. ದೆಹಲಿ 34 ನೇ ಸ್ಥಾನದಲ್ಲಿದೆ ಮತ್ತು ಮುಂಬೈ 47 ನೇ ಸ್ಥಾನದಲ್ಲಿದೆ.

ಈ ಅಧ್ಯಯನವು ಪ್ರತಿ ಮೈಲಿ ಚಾಲಿತ ಸಮಯ, ವೆಚ್ಚ ಮತ್ತು CO2 ಹೊರಸೂಸುವಿಕೆಯನ್ನು ಗಣನೆಗೆ ತೆಗೆದುಕೊಂಡಿತು ಮತ್ತು ವಿಶಿಷ್ಟವಾದ EV, ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗಾಗಿ ನಗರದೊಳಗೆ 10ಕಿ.ಮೀ (ಅಥವಾ 6-ಮೈಲಿ) ಪ್ರಯಾಣವನ್ನು ಪೂರ್ಣಗೊಳಿಸಲು ಎಷ್ಟು ಸಮಯ ತೆಗೆದುಕೊಂಡಿತು ಎಂಬುದನ್ನು ಪರಿಗಣಿಸುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!