ಬೆಂಗಳೂರು to ಸ್ಯಾನ್‌ ಫ್ರಾನ್ಸಿಸ್ಕೋ ಏರ್ ಇಂಡಿಯಾ ವಿಮಾನ ಸೇವೆ ಪುನರ್ ಆರಂಭ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಏರ್ ಇಂಡಿಯಾ ವಿಮಾನ ಸೇವೆ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಇದೀಗ ಬೆಂಗಳೂರಿನಿಂದ ಸ್ಯಾನ್‌ಫ್ರಾನ್ಸಿಸ್ಕೋ ಸಂಪರ್ಕಿಸುವ ನೇರ ವಿಮಾನ ಸೇವೆ ಸಂಚಾರ ಪುನರ್ ಆರಂಭಿಸಿದೆ.

ಶುಕ್ರವಾರ, ಭಾನುವಾರ ಮತ್ತು ಬುಧವಾರ -ಹೀಗೆ ವಾರದಲ್ಲಿ ಮೂರು ದಿನಗಳಂದು ಈ ಮಾರ್ಗದಲ್ಲಿ ಬೋಯಿಂಗ್ 777-200ಎಲ್ಆರ್ ವಿಮಾನ ಸಂಚರಿಸಲಿದೆ.

ಮೊದಲ ವಿಮಾನ ಎಐ 175 ಡಿಸೆಂಬರ್ 2ರಂದು 1420ಕ್ಕೆ (ಸ್ಥಳೀಯ ಕಾಲಮಾನ) ಬೆಂಗಳೂರಿನಿಂದ ಹೊರಟು ಅದೇ ದಿನ 1700 ಗಂಟೆಗೆ ಸ್ಯಾನ್ಫ್ರಾನ್ಸಿಸ್ಕೋ ತಲುಪಲಿದೆ. ಮೊದಲ ರಿಟರ್ನ್ ಫ್ಲೈಟ್ ಎಐ 176, 2022 ಡಿಸೆಂಬರ್ 2ರಂದು 2100 ಗಂಟೆಗೆ (ಸ್ಥಳೀಯ ಕಾಲಮಾನ) ಸ್ಯಾನ್ಫ್ರಾನ್ಸಿಸ್ಕೋದಿಂದ ಹೊರಟು 4ನೇ ಡಿಸೆಂಬರ್ 2022ರ 0425 ಗಂಟೆಗೆ (ಸ್ಥಳೀಯ ಕಾಲಮಾನ)+2 ಬೆಂಗಳೂರು ತಲುಪಲಿದೆ.

ಬೆಂಗಳೂರು ಮತ್ತು ಸ್ಯಾನ್ಫ್ರಾನ್ಸಿಸ್ಕೋ ನಡುವಿನ ನೇರ ಅಂತರ ಸುಮಾರು 13,993 ಕಿ.ಮೀ. ಆಗಿದೆ. ಹಾಗೂ ಈ ಎರಡೂ ನಗರಗಳು ಜಗತ್ತಿನ ಎರಡು ವಿರುದ್ಧ ದಿಕ್ಕುಗಳ ಕೊನೆಯಲ್ಲಿದ್ದು ಸುಮಾರು 13.5 ಗಂಟೆಗಳ ಟೈಮ್ ಝೋನ್ ಅಂತರವಿದೆ.ಈ ಮಾರ್ಗದಲ್ಲಿ ವಿಮಾನ ಸಂಚಾರವು ಸುರಕ್ಷಿತ, ವೇಗ ಹಾಗೂ ಹೆಚ್ಚು ಅಗ್ಗದ್ದಾಗಿದೆ. ಇದರೊಂದಿಗೆ ಪ್ರತಿ ವಾರ ಏರ್ ಇಂಡಿಯಾದ ಭಾರತ-ಅಮೆರಿಕ ನಾನ್-ಸ್ಟಾಪ್ ವಿಮಾನಗಳ ಫ್ರೀಕ್ವೆನ್ಸಿ (ವಿಮಾನಗಳ ಹಾರಾಟ ಸಂಖ್ಯೆ) 37ಕ್ಕೆ ಏರಲಿದೆ.

ಪ್ರಸ್ತುತ ಏರ್ ಇಂಡಿಯಾ ದೆಹಲಿಯಿಂದ ನ್ಯೂಯಾರ್ಕ್, ನೆವಾರ್ಕ್, ವಾಷಿಂಗ್ಟನ್ ಡಿಸಿ, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಷಿಕಾಗೋಗೆ ಹಾಗೂ ಮುಂಬೈಯಿಂದ ನೆವಾರ್ಕ್ಗೆ ತಡೆ-ರಹಿತ ವಿಮಾನಗಳನ್ನು ಕಾರ್ಯಾಚರಿಸುತ್ತಿದೆ. ಮುಂಬೈ ಮತ್ತು ಸ್ಯಾನ್ಫ್ರಾನ್ಸಿಸ್ಕೋ ನಡುವೆ ಮತ್ತು ನ್ಯೂಯಾರ್ಕ್ಗೆ ಪ್ರಪ್ರಥಮ ತಡೆ-ರಹಿತ ವಿಮಾನ ಸಂಚಾರ ಸೇವೆಯನ್ನು ಆರಂಭಿಸುವ ಮೂಲಕ ಅಮೆರಿಕದಲ್ಲಿ ತನ್ನ ರೆಕ್ಕೆಯನ್ನು ಇನ್ನಷ್ಟು ವಿಸ್ತರಿಸಲು ಏರ್ ಇಂಡಿಯಾ ಸಜ್ಜಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!