spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಬೆಂಗಳೂರಿಗರೇ ಎಚ್ಚರ! ಅಪಾಯದ ಅಂಚಿನಲ್ಲಿ 404 ಕಟ್ಟಡಗಳು: ವರದಿ

- Advertisement -Nitte

ಹೊಸದಿಗಂತ ಆನ್ ಲೈನ್ ಡೆಸ್ಕ್:

ಶಿಥಿಲಗೊಂಡ ಬಹುಮಹಡಿ ಕಟ್ಟಡಗಳು ಒಂದರ ಹಿಂದೆ ಒಂದು ಕುಸಿಯುತ್ತಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 404 ಕಟ್ಟಡಗಳು ಅಪಾಯದ ಅಂಚಿನಲ್ಲಿದೆ ಎಂದು ಬಿಬಿಎಂಪಿ ವರದಿ ತಿಳಿಸಿದೆ.
ಪ್ರಾರ್ಥಮಿಕ ಸರ್ವೇಯಲ್ಲಿ ಕಟ್ಟಡಗಳ ಸದೃಢತೆ ಹಾಗೂ ನಿರ್ಮಾಣದ ವರ್ಷದ ಆಧಾರದ ಮೇಲೆ ಕಟ್ಟಡ ಕುಸಿಯುವ ಹಂತದಲ್ಲಿದೆ ಎಂದು ಬಿಬಿಎಂಪಿ ಗುರುತಿಸಿದೆ.
15 ದಿನಗಳ ಕಾಲ ಸರ್ವೆ ನಡೆಸಿದ್ದು, ಪ್ರಾಥಮಿಕ ವರದಿ ಪ್ರಕಾರ ಬೆಂಗಳೂರಿನ 404 ಕಟ್ಟಡಗಳು ಅಪಾಯದಲ್ಲಿರುವುದು ತಿಳಿದುಬಂದಿದೆ ಎಂದು ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು.
ಈ ಸರ್ವೆ ಪ್ರಕಾರ ದಕ್ಷಿಣ ವಲಯದಲ್ಲೇ 103 ಕಟ್ಟಡಗಳು ಅಪಾಯದ ಅಂಚಿನಲ್ಲಿದ್ದು, ಪಶ್ಚಿಮ ವಲಯದಲ್ಲಿ 95 ಕಟ್ಟಡಗಳಿವೆ. ಪೂರ್ವದಲ್ಲಿ 67 ಕಟ್ಟಡಗಳು, ಮಹದೇವಪುರದಲ್ಲಿ 24 ಕಟ್ಟಡಗಳು, ರಾಜರಾಜೇಶ್ವರಿ ನಗರದಲ್ಲಿ 11, ಬೊಮ್ಮನಹಳ್ಳಿ 9, ಯಲಹಂಕ 84, ದಾಸರಹಳ್ಳಿ 44 ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ ಎಂದು ಬಿಬಿಎಂಪಿ ತಿಳಿಸಿದೆ.
ಅಪಾಯದಲ್ಲಿರುವ ಕಟ್ಟಡಗಳ ವರದಿ ಬಂದ 24 ಗಂಟೆಗಳಲ್ಲಿ ಅವುಗಳನ್ನು ನೆಲಸಮ ಮಾಡಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2019ರಲ್ಲಿನ ಸರ್ವೆಯಲ್ಲಿ 185 ಕಟ್ಟಡಗಳು ಅಪಾಯದಲ್ಲಿತ್ತು. ಆದರೆ ಈವರೆಗೆ 10 ಕಟ್ಟಡಗಳನ್ನು ಮಾತ್ರ ನೆಲಸಮ ಮಾಡಲಾಗಿದ್ದು, ಉಳಿದ 175 ಕಟ್ಟಡಗಳನ್ನು ಹಾಗೆ ಉಳಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss