ಹಳ್ಳಿ ಪ್ರತಿಭೆ: ಕಿರಿಯ ವಯಸ್ಸಿನ ಯುವತಿ ಈಗ ಹೈಕೋರ್ಟ್ ನ್ಯಾಯಾಧೀಶೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸಾಧನೆ ಎನ್ನುವುದು ಯಾರ ಸ್ವತ್ತೂ ಅಲ್ಲ ಎನ್ನುವ ಮಾತಿದೆ. ಈ ಮಾತಿಗೆ ಉದಾಹರಣೆಯಾಗಲಿದೆ ಈ ಯುವತಿಯ ಸಾಧನೆ.

ಕೋಲಾರ ಜಿಲ್ಲೆಯ ಬಂಗಾರಪೇಟೆಯ ಯಳಬುರ್ಗಿ ಗ್ರಾಮದ ಕಾರಹಳ್ಳಿಯ 25ರ ಯುವತಿ ಎನ್.ಗಾಯತ್ರಿ ಸಿವಿಲ್‌ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಯುವತಿ ಇಡೀ ಹಳ್ಳಿಗೆ ಕೀರ್ತಿ ತಂದಿದ್ದಾರೆ.

2021ರಲ್ಲಿ ಕಾನೂನು ಪದವಿ ಮುಗಿಸಿದ್ದ ಯುವತಿಯ ಸತತ ಪ್ರಯತ್ನಗಳ ನಂತರ ಕಿರಿಯ ವಯಸ್ಸಿಗೇ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶೆಯಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.

ಬಡತನ ಹಿನ್ನೆಲೆಯಿಂದ ಬಂದ ಗಾಯತ್ರಿ ಅವರು ತಾಲೂಕಿನ ಕಾರಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪಿಯು ಶಿಕ್ಷಣ ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!