ಬಾಂಗ್ಲಾದಲ್ಲಿ ಮಳೆಯಬ್ಬರ: ಭೀಕರ ಪ್ರವಾಹದಲ್ಲಿ ಸಿಲುಕಿದ 20 ಲಕ್ಷ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಬಾಂಗ್ಲಾದೇಶದ ಈಶಾನ್ಯ ಮತ್ತು ಉತ್ತರ ತ್ಸಿಲ್ಹೆಟ್‌ ಪ್ರದೇಶದಲ್ಲಿ ಅಬ್ಬರಿಸುತ್ತಿರುವ ಮಳೆಗೆ ಜನಜೀವನ ತತ್ತರಿಸಿದೆ. ಸುಮಾರು 20 ಲಕ್ಷಕ್ಕೂ ಹೆಚ್ಚಿನ ಜನರು ಪ್ರವಾಹಕ್ಕೆ ಸಿಲುಕಿದ್ದು ಅವರ ರಕ್ಷಣೆಗೆ ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸುತ್ತಿವೆ.
ಭಾರೀ ಮಳೆಯಿಂದ ಉಕ್ಕಿಹರಿಯುತ್ತಿರುವ ಬಾಂಗ್ಲಾದೇಶದ ನದಿಗಳು ಭೀಕರ ಪ್ರವಾಹಕ್ಕೆ ಕಾರಣವಾಗಿವೆ, ಸುಮಾರು 20 ಲಕ್ಷ ಜನರು ನಿರಾಶ್ರಿತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಈಶಾನ್ಯದಲ್ಲಿ ಹರಿಯುತ್ತಿರುವ ಪ್ರವಾಹದ ನೀರು ಬರಾಕ್ ನದಿಯ ಪ್ರಮುಖ ಒಡ್ಡುಗಳನ್ನು ಮುರಿದು, ಬಾಂಗ್ಲಾದೇಶದ ಝಕಿಗಂಜ್‌ನಲ್ಲಿ ಕನಿಷ್ಠ 100 ಹಳ್ಳಿಗಳನ್ನು ಮುಳುಗಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಈಶಾನ್ಯ ಜಿಲ್ಲೆಗಳಾದ ಸುನಮ್‌ಗಂಜ್ ಮತ್ತು ಸಿಲ್ಹೆಟ್ ಪ್ರವಾಹಕ್ಕೆ ತತ್ತರಿಸಿದ್ದು ಪರಿಹಾರ ಕಾರ್ಯಾಚೆನೆಗೆ ಸೈನಿಕರನ್ನು ನಿಯೋಜಿಸಲಾಗಿದೆ, ಅಲ್ಲಿ ಸಾವಿರಾರು ಮನೆಗಳು ಮುಳುಗಿವೆ ಮತ್ತು ವಿದ್ಯುತ್ ಕಡಿತಗೊಂಡಿದೆ. ಪ್ರವಾಹದಿಂದ ಈ ವಾರ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ. 50,000 ಕುಟುಂಬಗಳು ವಿದ್ಯುತ್ ಇಲ್ಲದೆ ಪರದಾಡುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!