ಗ್ರಿಡ್‌ ವೈಫಲ್ಯದಿಂದ ಕತ್ತಲಲ್ಲಿ ಮುಳುಗಿದ ಬಾಂಗ್ಲಾದೇಶ: ದೇಶದ 80 ಶೇ. ಭಾಗದಲ್ಲಿ ಕರೆಂಟ್‌ ಇಲ್ಲದೇ ಕಂಗಾಲಾದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಾಂಗ್ಲಾದೇಶದಲ್ಲಿ ವಿದ್ಯುತ್‌ ಗ್ರಿಡ್‌ ವೈಫಲ್ಯದ ಕಾರಣದಿಂದ ದೇಶವು ಸಾಮೂಹಿಕ ಕರಾಳತೆಯನ್ನು ಎದುರಿಸುವಂತಾಗಿದೆ. ದೇಶದ 75-80 ಶೇಕಡಾದಷ್ಟು ಪ್ರದೇಶಗಳಲ್ಲಿ ವಿದ್ಯತ್‌ ಕಡಿತವುಂಟಾಗಿದ್ದು ಸುಮಾರು 140 ಮಿಲಿಯನ್‌ ಜನರು ಕರೆಂಟ್‌ ಇಲ್ಲದೇ ಪರಿಪಾಟಲು ಅನುಭವಿಸುತ್ತಿದ್ದಾರೆ ಎಂದು ಮೂಲಗಳು ವರದಿ ಮಾಡಿವೆ.

ವಿದ್ಯುತ್‌ ಸರಬರಾಜು ಮಾಡುವ ರಾಷ್ಟ್ರೀಯ ಗ್ರಿಡ್‌ ವೈಫಲ್ಯದ ಕಾರಣದಿಂದ ದೇಶದ ಮುಕ್ಕಾಳು ಬಾಗದಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು ಸರಿಪಡಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಬಾಂಗ್ಲಾದೇಶ ವಿದ್ಯುತ್ ಅಭಿವೃದ್ಧಿ ಮಂಡಳಿ ತಿಳಿಸಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್‌ ವರದಿ ಮಾಡಿದೆ.

ಗ್ರಿಡ್ ಕುಸಿತಕ್ಕೆ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಮತ್ತು 45 ಶೇಕಡಾ ಪ್ರದೇಶಗಳಲ್ಲಿ ವಿದ್ಯುತ್ ಅನ್ನು ಪುನಃಸ್ಥಾಪಿಸಲಾಗಿದೆ ಎನ್ನಲಾಗಿದ್ದು ಸಂಪೂರ್ಣವಾಗಿ ಯಾವಾಗ ಸರಿಯಾಗುತ್ತದೆ ಎನ್ನುವು ಅಸ್ಪಷ್ಟವಾಗೇ ಉಳಿದಿದೆ ಎಂದು ಮೂಲಗ ವರದಿ ತಿಳಿಸಿದೆ.

ಆಮದು ಮಾಡಿಕೊಳ್ಳುವ ನೈಸರ್ಗಿಕ ಅನಿಲದಿಂದ ತನ್ನ ಮುಕ್ಕಾಲು ಭಾಗದಷ್ಟು ವಿದ್ಯುತ್ ಅನ್ನು ಪಡೆಯುವ ಬಾಂಗ್ಲಾದೇಶವು ಈ ವರ್ಷ ಹೆಚ್ಚಿನ ವಿದ್ಯುತ್ ಬೇಡಿಕೆಯನ್ನು ಪರಿಹರಿಸಲು ಸಾಧ್ಯವಾಗದೇ ಆಗಾಗ್ಗೆ ವಿದ್ಯುತ್ ಕಡಿತವನ್ನು ಎದುರಿಸುತ್ತಿದೆ.

ಉಕ್ರೇನ್‌ನಲ್ಲಿ ರಷ್ಯಾದ ಯುದ್ಧದಿಂದ ಹೆಚ್ಚಿದ ಜಾಗತಿಕ ಬೆಲೆಗಳ ನಡುವೆ ದೇಶದ 77 ಅನಿಲ ಚಾಲಿತ ಘಟಕಗಳಲ್ಲಿ ಮೂರನೇ ಒಂದು ಭಾಗದಷ್ಟು ಇಂಧನದ ಕೊರತೆಯಿದೆ ಎಂದು ಸರ್ಕಾರಿ ಅಂಕಿಅಂಶಗಳು ಮಂಗಳವಾರ ತೋರಿಸಿವೆ.

ವಿದ್ಯುತ್ ಬಳಕೆಯ ಮಾದರಿಗಳಲ್ಲಿನ ಅನಿರೀಕ್ಷಿತ ಅಥವಾ ಹಠಾತ್ ಬದಲಾವಣೆಗಳಿಂದ ಸಂಭಾವ್ಯವಾಗಿ ಬೇಡಿಕೆ ಮತ್ತು ಪೂರೈಕೆಯ ನಡುವೆ ಹೆಚ್ಚಿನ ಹೊಂದಾಣಿಕೆಯಿಲ್ಲದಿದ್ದಾಗ ಗ್ರಿಡ್ ವೈಫಲ್ಯಗಳು ಸಾಮಾನ್ಯವಾಗಿ ಸಂಭವಿಸುತ್ತವೆ. ಮಂಗಳವಾರದಂದು ಬಾಂಗ್ಲಾದೇಶದ ಗರಿಷ್ಠ ವಿದ್ಯುತ್ ಬೇಡಿಕೆಯು ಬಾಂಗ್ಲಾದೇಶದ ವಿದ್ಯುತ್ ಅಭಿವೃದ್ಧಿ ಮಂಡಳಿಯು 13,800 MW ಮುನ್ಸೂಚನೆಗಿಂತ 3% ಹೆಚ್ಚಾಗಿದೆ ಎನ್ನಲಾಗಿದೆ.

ಪ್ರಸ್ತುತ ರಾಷ್ಟ್ರೀಯ ವಿದ್ಯುತ್ ವ್ಯತ್ಯಯದಿಂದ ವಾಲ್‌ಮಾರ್ಟ್ VF ಕಾರ್ಪ್‌, ಜಾರಾ ಮತ್ತು ಅಮೇರಿಕನ್ ಈಗಲ್‌ನಂತಹ ಗ್ರಾಹಕರಿಗೆ ಸರಬರಾಜು ಮಾಡುವ ಬಾಂಗ್ಲಾದೇಶದ ಲಾಭದಾಯಕ ರಫ್ತು-ಆಧಾರಿತ ಗಾರ್ಮೆಂಟ್ ಉದ್ಯಮವೂ ಕಾರ್ಯ ನಿರ್ವಹಿಸಲು ಅಸಮರ್ಥವಾಗಿದ್ದು ದೇಶಕ್ಕೆ ಇದರಿಂದ ಬಹಳ ನಷ್ಟವುಂಟಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!