ನೋಟು ಬದಲಾವಣೆಗೆ ತೆರಳುವ ಮುನ್ನ ಗಮನಿಸಿ: ಜೂನ್‌ ತಿಂಗಳಲ್ಲಿ 12 ದಿನಗಳು ಬ್ಯಾಂಕ್‌ಗೆ ರಜೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಜೂನ್ 2023ರ ಬ್ಯಾಂಕ್ ರಜಾದಿನಗಳ ಪಟ್ಟಿಯನ್ನು ಪ್ರಕಟ ಮಾಡಿದೆ. ಬ್ಯಾಂಕ್‌ನಲ್ಲಿ ವ್ಯವಹರಿಸಲು ಮತ್ತು ನೋಟು ಬದಲಾವಣೆಗೆ ತೆರಳುವವರು ಈ ಸುದ್ದಿಯನ್ನು ಒಮ್ಮೆ ಗಮನಿಸಿ.

ಆರ್‌ಬಿಐ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, 2023ರ ಜೂನ್ ತಿಂಗಳಲ್ಲಿ 12 ದಿನಗಳು ಬ್ಯಾಂಕ್‌ಗೆ ರಜೆ ಇರುತ್ತದೆ. ಈ ರಜೆಗಳು ದೇಶದಾದ್ಯಂತ ಬ್ಯಾಂಕ್‌ಗಳಿಗೆ ಅನ್ವಯಿಸುವುದಿಲ್ಲ, ಆರ್‌ಬಿಐ ಪ್ರಕಟಿಸಿದ ಪಟ್ಟಿಯ ಪ್ರಕಾರ ವಿವಿಧ ರಾಜ್ಯಗಳಲ್ಲಿನ ಬ್ಯಾಂಕ್‌ಗಳಿಗೆ ಅನ್ವಯವಾಗಲಿದೆ.

ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಭಾನುವಾರದ ಹೊರತಾಗಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕುಗಳಿಗೆ ರಜೆ ಇರುತ್ತದೆ.

ಜೂನ್‌ ತಿಂಗಳಲ್ಲಿ ಬ್ಯಾಂಕ್‌ ರಜಾದಿನಗಳ ಪಟ್ಟಿ:

ಜೂನ್ 04, 2023 – ಭಾನುವಾರ

ಜೂನ್ 10, 2023 – ಎರಡನೇ ಶನಿವಾರ

ಜೂನ್ 11, 2023 – ಭಾನುವಾರ

ಜೂನ್ 15, 2023 – ಸಂಕ್ರಾಂತಿ-ಮಿಜೋರಾಂ ಮತ್ತು ಒಡಿಶಾದಲ್ಲಿ ಬ್ಯಾಂಕ್‌ ರಜೆ

ಜೂನ್ 18, 2323 – ಭಾನುವಾರ

ಜೂನ್ 20, 2023 – ರಥಯಾತ್ರೆ – ಒಡಿಶಾ ಮತ್ತು ಮಣಿಪುರದ ಬ್ಯಾಂಕ್‌ಗಳು ರಜೆ

ಜೂನ್ 24, 2023 – ನಾಲ್ಕನೇ ಶನಿವಾರ ರಜೆ

ಜೂನ್ 25, 2023 – ಭಾನುವಾರ

ಜೂನ್ 26, 2023 – ಖಾರ್ಚಿ ಪೂಜೆ-ತ್ರಿಪುರಾದಲ್ಲಿ ಬ್ಯಾಂಕುಗಳಿಗೆ ರಜೆ

ಜೂನ್ 28, 2023 – ಈದ್ ಉಲ್ ಅಝಾ-ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ ಮತ್ತು ಕೇರಳದಲ್ಲಿ ಬ್ಯಾಂಕುಗಳಿಗೆ ರಜೆ

ಜೂನ್ 29, 2023 – ಈದ್ ಉಲ್ ಅಝಾ-ದೇಶಾದ್ಯಂತ ಬ್ಯಾಂಕುಗಳಿಗೆ ರಜೆ

ಜೂನ್ 30, 2023 – ರಿಮಾ ಈದ್ ಉಲ್ ಅಝಾ-ಮಿಜೋರಾಂ ಮತ್ತು ಒಡಿಶಾದಲ್ಲಿ ಬ್ಯಾಂಕ್‌ಗಳಿಗೆ ರಜೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!