ಸಂಘಟನೆಯೊಳಕ್ಕೆ ಸೇರಿಕೊಂಡಿದ್ದ ಇಬ್ಬರು ಪೊಲೀಸ್‌ ಬೇಹುಗಾರರಿಗೆ ಮರಣದಂಡನೆ ವಿಧಿಸಿದ ಉಲ್ಫಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಿಷೇಧಿತ ಸಂಘಟನೆಯಾದ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್-ಇಂಡಿಪೆಂಡೆಂಟ್ (ಉಲ್ಫಾ-ಐ)ಸಂಘಟನೆಯು ಅಸ್ಸಾಂನಲ್ಲಿ ಹೊಸದಾಗಿ ನೇಮಕಮಾಡಿಕೊಂಡಿದ್ದ ತನ್ನ ಇಬ್ಬರು ಕಾರ್ಯಕರ್ತರನ್ನು ಬೇಹುಗಾರಿಕೆ ಆರೋಪದ ಮೇಲೆ ಗಲ್ಲಿಗೇರಿಸಿರುವುದಾಗಿ ಹೇಳಿಕೊಂಡಿದೆ.
ಮೇ 4 ಮತ್ತು ಮೇ 5 ರಂದು ಸಂಘಟನೆಯ ಕೆಳ ನ್ಯಾಯ ಮಂಡಳಿಯು ಬಾರ್‌ಪೇಟಾದ ಧನಜಿತ್ ದಾಸ್ ಮತ್ತು ಬೈಹತಾ ಚೈರಾಲಿಯ ಸಂಜೀಬ್ ಶರ್ಮಾ ಅವರಿಗೆ ‘ಮರಣ ದಂಡನೆ’ ವಿಧಿಸಿದೆ ಎಂದು ಸಂಘಟನೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿದೆ.
ಇತ್ತೀಚೆಗೆ ಸಂಘಟನೆಗೆ ಸೇರಿದ್ದ ಈ ಇಬ್ಬರನ್ನು ರಾಜ್ಯ ಪೊಲೀಸರೇ ಸಂಘಟನೆಯೊಳಗೆ ಬೇಹುಗಾರರನ್ನಾಗಿ ನೇಮಿಸಿದ್ದರು. ಅವರಿಬ್ಬರು ಪೊಲೀಸರೊಂದಿಗೆ ರಹಸ್ಯವಾಗಿ ಸಂಪರ್ಕದಲ್ಲಿದ್ದರು. ಅಲ್ಲದೇ ಹಲವಾರು ಕಾರ್ಯಕರ್ತರನ್ನು ಶರಣಾಗತಿಗೆ ಪ್ರೇರೇಪಿಸಿಸುತ್ತಿದ್ದರು. ಅವರು ಬೇಹುಗಾರರೆಂಬ ಸುಳಿವು ಸಿಗುತ್ತಲೇ ಧನಜಿತ್‌ ಏ.೨೪ ರಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆದರೆ ಮರುದಿನವೇ ಸಿಕ್ಕಿಬಿದ್ದದ್ದ. ನಮ್ಮ ಕೆಳ ನ್ಯಾಯಾಂಗ ಮಂಡಳಿಯು ವಿಶೇಷ ವಿಚಾರಣೆಯು ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಿತು. ಅದರಿಂದಾಗಿ ಅವರನ್ನು ಮೇ.೭ ರಂದು ಮರಣದಂಡನೆ ವಿಧಿಸಿತು ಎಂದು ಸಂಘಟನೆ ಪ್ರಕಟಣೆ ತಿಳಿಸಿದೆ.
ಹಣದ ದುರಾಸೆಗೆ ಬಿದ್ದು ಸಂಘಟನೆಯ ಚಟುವಟಿಕೆಗಳ ಮಾಹಿತಿಯನ್ನು ಪೊಲೀಸರಿಗೆ ರವಾನಿಸುತ್ತಿದ್ದುದಾಗಿ ಸಂಜಿಬ್ ಶರ್ಮಾ ತಪ್ಪೊಪ್ಪಿಕೊಂಡಿದ್ದಾನೆ ಎಂದು ಸಂಘಟನೆ ಹೇಳಿಕೊಂಡಿದೆ.
ಶನಿವಾರ, ಉಲ್ಫಾ-ಐ ವೀಡಿಯೊವನ್ನು ಬಿಡುಗಡೆ ಮಾಡಿತು, ಇದರಲ್ಲಿ ಇಬ್ಬರು ಯುವಕರು ಪೊಲೀಸರ ಪರವಾಗಿ ಮತ್ತು ಉಲ್ಫಾ-ಐ ವಿರುದ್ಧ ಕಾರ್ಯನಿರ್ವಹಿಸಿದ್ದಾಗಿ ಒಪ್ಪಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!