ಶಾಂತಿ ಕದಡುವ ಪಿಎಫ್‌ಐ ನಿಷೇಧಿಸಿದ್ದು ಸ್ವಾಗತಾರ್ಹ :ಎನ್.ರವಿಕುಮಾರ್

ಹೊಸದಿಗಂತ ವರದಿ ಕಲಬುರಗಿ:

ದೇಶಾದ್ಯಂತ ದೇಶದ್ರೋಹಿ ಚಟುವಟಿಕೆಗಳು ನಡೆಸುವಂತಹ ಪಿ.ಎಫ್.ಐ.ಸಂಘಟನೆಯನ್ನು ಐದು ವರ್ಷಗಳ ಕಾಲ ನಿಷೇಧಿಸಿದ್ದು,ಕೇಂದ್ರ ಸರ್ಕಾರದ ತೀಮಾ೯ನ ಸ್ವಾಗತಾರ್ಹಕರ ಸಂಗತಿ ಎಂದು ರಾಜ್ಯ ಪ್ರಧಾನ ಕಾಯ೯ದಶಿ೯,ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.

ಅವರು ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಿಎಫಐ ಸಂಘಟನೆಯನ್ನು ನಿಷೇಷ ಮಾಡಲು ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಪಿಎಫ.ಐ ಒಂದು ಟೆರರಿಸ್ಟ್ ಸಂಘಟನೆ, ದೇಶದಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗಲು ಮುಂದಾಗಿತ್ತು ಎಂದರು.

ಪಿ.ಎಫ್.ಐ.ನಿಷೇಧ ಮಾಡಲು ಸಕಾ೯ರಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿದ್ದು,ಸಮಾಜದಲ್ಲಿ ಈ ಸಂಘಟನೆಯಿಂದ ಶಾಂತಿ ಕದಡುವ ಕೆಲಸ, ದ್ವೇಷ ಹುಟ್ಟಿಸುವ ಕಾಯ೯ ನಡೆದಿತ್ತು.ಆದರೆ, ಎಸ್.ಡಿ.ಪಿ.ಐ ಒಂದು ರಾಜಕೀಯ ಪಕ್ಷ, ಅದು ರಾಜಕೀಯ ಕಾಯ೯ದಲ್ಲಿ ಮಗ್ನವಾಗಿದೆ ಎಂದರು.

ಆರ್.ಎಸ್.ಎಸ್.ಬ್ಯಾನ್ ಮಾಡಬೇಕು ಎನ್ನುವ ವ್ಯಕ್ತಿಗಳು ಅಜ್ಞಾನದ ಅಂದಕಾರದಲ್ಲಿ ಇದ್ದಾರೆ.ಆರ್.ಎಸ್.ಎಸ್.ನಂತಹ ಸಂಘಟನೆ ಕಟ್ಟಬೇಕೆಂದು ಜಗತ್ತಿನ ಹಲವು ರಾಷ್ಟ್ರಗಳು ಮುಂದಾಗಿವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!