ಬಂಟ್ವಾಳಕ್ಕೆ ಕಾಡಿದ ನೆರೆಭೀತಿ: ಮಿಲಿಟರಿ ಗ್ರೌಂಡ್ ಜಲಾವೃತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನೇತ್ರಾವತಿ ನದಿಯಲ್ಲಿ ನೀರಿನಮಟ್ಟ ಇನ್ನಷ್ಟು ಏರಿಕೆಯಾಗುತ್ತಿದ್ದು, ಬಂಟ್ವಾಳ ಪರಿಸರದಲ್ಲಿ ಆತಂಕ ಹುಟ್ಟುಹಾಕಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುತ್ತಿದ್ದು, ಬಂಟ್ವಾಳ ಪುರಸಭೆ ವ್ಯಾಪ್ತಿಯ ಪಾಣೆಮಂಗಳೂರು ಹಳೆ ಪೇಟೆ ಮಿಲಿಟರಿ ಗ್ರೌಂಡ್ ಜಲಾವೃಯಗೊಂಡಿದೆ.

ಪಾಣೆಮಂಗಳೂರು ಸೇತುವೆ ಬಳಿಯ ಕಂಚಿಕಾರ ಪೇಟೆ ರಸ್ತೆಗೂ ನೀರು ನುಗ್ಗಿದ್ದು, ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಅಡಳಿತ ಸೂಚಿಸಿದೆ. ಯಾವುದೇ ಅಪಾಯದ ಸ್ಥಿತಿ ಕಂಡುಬಂದರೆ ತಕ್ಷಣ ಪೋಲಿಸ್ ಇಲಾಖೆ ಅಥವಾ ಕಂದಾಯ ಇಲಾಖೆಗೆ ಮಾಹಿತಿ ನೀಡುವಂತೆ ಆಡಳಿತ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!