ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಮವಾರ ಸಂಜೆಯಿಂದದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಾದ್ಯಂತ ಎಡೆಬಿಡದೆ ಮಳೆಯಾಗುತ್ತಿದ್ದು, ಪಾಣೆಮಂಗಳೂರು, ಬಂಟ್ವಾಳ ಸಹಿತ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ಮಾಮೂಲಿಯಂತೆ ಆಲಡ್ಕದಲ್ಲಿ ಸುಮಾರು ಹದಿನೈದು ಮನೆಗಳು ಜಲಾವೃತಗೊಂಡಿದೆ.ಬಂಟ್ವಾಳ ಸಮೀಪದ ಜಕ್ರಿಬೆಟ್ಟುವಿನ ಕೊಟ್ರಕಣಿ ನೀರು ರಸ್ತೆಗೆ ನುಗ್ಗಿದ್ದರೆ, ಕಂಚಿಕಾರ ಪೇಟೆ, ಬಸ್ತಿಪಡ್ಪುವಿಲ್ಲಿ ರಸ್ತೆಗೆ ನುಗ್ಗಲು ಹವಣಿಸುತ್ತಿದೆ.
ಬಂಟ್ವಾಳ ಬಡ್ಡಕಟ್ಟೆಯ ಬಸ್ ತಂಗುದಾಣವು ಜಲಾವೃತಗೊಂಡಿದೆ. ಬ್ರಹ್ಮರಕೊಟ್ಲು, ಆರ್ಕುಳ, ಸರಪಾಡಿ, ಸಜೀಪ ಮೊದಲಾದ ತಗ್ಗುಪ್ರದೇಶದಲ್ಲಿ ಜಲಾವೃತಗೊಂಡಿದ್ದು, ತೋಟ, ಗದ್ದೆಯಲ್ಲಿ ನೀರು ನಿಲುಗಡೆಯಾಗಿದೆ.
ಜಕ್ರಬೆಟ್ಟು ಸೇತುವೆ ಮತ್ರು ಅಣೆಕಟ್ಟಿನಹಾಗೂ ತುಂಬೆ ಡ್ಯಾಂನ ಎಲ್ಲಾ ಗೇಟ್ ಗಳನ್ನು ತೆರೆಯಲಾಗಿದೆ. ಮಂಗಳವಾರ ನಸುಕಿನಿಂದಲೇ ವಿಪರೀತ ಗಾಳಿ, ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.