ಮೆಕ್ಸಿಕೋ ಬಾರ್‌ನಲ್ಲಿ ಗುಂಡಿನ ದಾಳಿ: ಒಂಭತ್ತು ಮಂದಿ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಧ್ಯ ಮೆಕ್ಸಿಕನ್‌ನ ಗ್ವಾನಾಜುವಾಟೊದ ಬಾರ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾರ್‌ಗೆ ಶಸ್ತ್ರಾಸ್ತ್ರಗಳೊಂದಿಗೆ ಶಸ್ತ್ರಸಜ್ಜಿತ ಜನರ ಗುಂಪೊಂದು ನುಗ್ಗಿ ಬಾರ್‌ನೊಳಗಿದ್ದ ಜನರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಐವರು ಪುರುಷರು ಮತ್ತು ನಾಲ್ವರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನಿಬ್ಬರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಗಾಯಗೊಂಡಿರುವ ಮಹಿಳೆಯರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿಸಿದರು. ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಇನ್ನೂ ಗುರುತಿಸಲಾಗಿಲ್ಲ. ಘಟನಾ ಸ್ಥಳದಲ್ಲಿ ಅಪರಾಧಿಗಳ ಗುಂಪಿಗೆ ಸಂಬಂಧಿಸಿದ ಎರಡು ಪೋಸ್ಟರ್‌ಗಳನ್ನು ಬಿಡಲಾಗಿದೆ. ಮೆಕ್ಸಿಕೋದಲ್ಲಿ ಇಂತಹ ಗುಂಡಿನ ದಾಳಿಗಳನ್ನು ಮಾಡಿ ಈ ರೀತಿ ಪೋಸ್ಟರ್ ಗಳನ್ನು ಹಾಕಿ ಸಂದೇಶ ರವಾನಿಸುತ್ತಿದ್ದಾರೆ. ಇಂಡಸ್ಟ್ರಿಯಲ್ ಹಬ್ ಎಂದು ಕರೆಯಲ್ಪಡುವ ಗುನಾಜುಟೊನಲ್ಲಿ ಆಗಾಗ್ಗೆ ಗ್ಯಾಂಗ್ ವಾರ್ ನಡೆಯುತ್ತಿರುತ್ತದೆ. ಕಳೆದ ತಿಂಗಳು ಇರುಪುಟೊ ನಗರದ ಬಾರ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದರೆ, ಸೆಪ್ಟೆಂಬರ್‌ನಲ್ಲಿ ಇದೇ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ 10 ಜನರು ಸಾವನ್ನಪ್ಪಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!