ಹೊಸದಿಗಂತ ವರದಿ ಮಂಡ್ಯ:
ಬಾರ್ಬೆಂಡರ್‌ನ ಕತ್ತು ಸೀಳಿ ದಾರುಣವಾಗಿ ಹತ್ಯೆ ಮಾಡಿರುವ ಘಟನೆ ಮದ್ದೂರು ತಾಲೂಕು ಕೆಎಂ ದೊಡ್ಡಿಯ ಮಂಡ್ಯ ರಸ್ತೆಯಲ್ಲಿ ಜರುಗಿದೆ. ಹಣಕಾಸಿನ ವಿಚಾರಕ್ಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಮೆಳ್ಳಹಳ್ಳಿ ಗ್ರಾಮದ 31 ವರ್ಷದ ಮಂಟೇಸ್ವಾಮಿ ಕೊಲಿಯಾದ ವ್ಯಕ್ತಿ.
ಮಂಡ್ಯ ರಸ್ತೆಯಲ್ಲಿರುವ ಜಮೀನೊಂದರಲ್ಲಿ ಕತ್ತು ಕೊಯ್ದ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮಂಟೇಸ್ವಾಮಿ ರಾತ್ರಿಯಿಡೀ ಮನೆಗೆ ಬಾರದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಂಬಂಧಿಕರು ಹುಡುಕಾಡಿದ್ದಾರೆ. ದಾರಿಯಲ್ಲಿ ಹೋಗುವಾಗ ಈತನ ಬೈಕ್ ಕಣ್ಣಿಗೆ ಬಿದ್ದಿದ್ದು, ಪಕ್ಕದ ಜಮೀನಿನಲ್ಲಿ ಮೃತದೇಹ ಪತ್ತೆಯಾಗಿದೆ.
ಕೂಡಲೇ ಪೊಲೀಸರಿಗೆ ವಿಷಯ ಮುಟ್ಟಿಸಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ. ಕೆ.ಎಂ. ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.