Wednesday, August 10, 2022

Latest Posts

ಯುವಕನ ಬರ್ಬರ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ವಿಜಯಪುರ:

ಜಿಲ್ಲೆಯ ಚಡಚಣ ಪಟ್ಟಣದಲ್ಲಿ ವಿವಾಹಿತೆ ಜೊತೆ ಅನೈತಿಕ ಸಂಬಂಧ ಹೊಂದಿರುವ ಶಂಕೆ ಹಿನ್ನೆಲೆ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಿ, ಅರೆಬರೆ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯ ಚಡಚಣ ಪಟ್ಟಣದ ಸುರೇಖಾ ಉರ್ಫ್ ಪಲ್ಲವಿ ವಿಕ್ರಮ ಕಾಟಕರ, ವಿಕ್ರಮ ಕೈಲಾಸನಾಥ ಕಾಟಕರ, ಅಜೀತ ಉರ್ಫ್ ಅಜಯ ಶಿವದಾಸ ಶಿಂದೆ ಬಂಧಿತ ಆರೋಪಿಗಳು ಎಂದರು.
ಈ ಆರೋಪಿಗಳು ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಅರವಿಂದ ಮಲ್ಲಣ್ಣ ದ್ಯಾಪುರ (23) ಎಂಬ ಯುವಕನನ್ನು ಬರ್ಬರವಾಗಿ ಕೊಲೆ ಮಾಡಿ, ಅರೆಬರೆ ಸುಟ್ಟು ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಂಧಿಸಲಾಗಿದೆ ಎಂದರು.
ಯುವಕ ಅರವಿಂದ ದ್ಯಾಪುರ ಬಿಎ ಪದವೀಧರನಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆ ತಯಾರಿಗಾಗಿ ಇಂಡಿ ಪಟ್ಟಣದಲ್ಲಿ ಬಾಡಿಗೆ ರೂಮ್ ಮಾಡಿಕೊಂಡು ವಾಸವಿದ್ದ. ಅದೇ ಪಟ್ಟಣದ ರೇವಪ್ಪ ನಗರದ ಸುರೇಖಾ ಉರ್ಫ್ ಪಲ್ಲವಿ ಕಾಟಕರ ಇವಳ ಪರಿಚಯವಾಗಿ, ಇಬ್ಬರಲ್ಲಿ ಪರಸ್ಪರ ಸಲುಗೆ ಬೆಳೆದಿದೆ. ಇದಾದ ಕೆಲವೇ ದಿನಗಳಲ್ಲಿ ಯುವತಿಯನ್ನು ಚಡಚಣ ಪಟ್ಟಣದ ವಿಕ್ರಮನೊಂದಿಗೆ ವಿವಾಹವಾಗಿದೆ. ವಿವಾಹ ಬಳಿಕವೂ ಯುವಕ, ಯುವತಿ ಪರಸ್ಪರ ಸಂಪರ್ಕಿಸುತ್ತಿದ್ದರಿಂದ, ಯುವತಿ ಮನೆಯವರಲ್ಲಿ ಅನೈತಿಕ ಶಂಕೆ ಉಂಟಾಗಿ, ಯುವಕನ್ನು ಚಡಚಣಕ್ಕೆ ಕರೆಸಿಕೊಂಡು, ಹರಿತವಾದ ಆಯುಧದಿಂದ ಹತ್ಯೆಗೈದ್ದು, ಅರೆಬರೆ ಸುಟ್ಟು ಹಾಕಿದ್ದರು ಎಂದು ಹೇಳಿದರು.
ಮತ್ತೊಂದು ಪ್ರಕರಣಕ್ಕೆ ಸಂಬಂಧಿಸಿದಂತೆ, ಜಿಲ್ಲೆಯ ನಿಡಗುಂದಿಯಲ್ಲಿ ಮಗಳಿಗೆ ಕಾಡಿಸುತ್ತಿದ್ದ ಎನ್ನುವ ಕಾರಣಕ್ಕೆ ಯುವಕನನ್ನು ಬರ್ಬರವಾಗಿ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ನಾಗಪ್ಪ ಯಮನಪ್ಪ ಪೂಜಾರಿ ಎಂಬ ಆರೋಪಿಯನ್ನು ಬಂಧಿಸಲಾಗಿದೆ ಎಂದರು.
ಮಹೇಶ ಶರಣಪ್ಪ ದಳವಾಯಿ ಎಂಬವನು ತನ್ನ ಮಗಳಿಗೆ ಕಾಡಿಸುತ್ತಿದ್ದ ಎನ್ನುವ ಕಾರಣಕ್ಕೆ, ನಾಗಪ್ಪ ಬರ್ಬರವಾಗಿ ಹತ್ಯೆ ಮಾಡಿದ್ದ, ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದರು.
ಎಎಸ್ಪಿ ಡಾ.ರಾಮ ಅರಸಿದ್ದಿ, ಡಿವೈಎಸ್‌ಪಿ ಲಕ್ಷ್ಮಿ ನಾರಾಯಣ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss