ಬ್ಯಾರಿಸ್ಟೋವ್ ಶತಕ: ಇಂಗ್ಲೆಂಡಿಗೆ ಇನ್ನಿಂಗ್ಸ್ ಲೀಡ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ಯಾರಿಸ್ಟೋವ್ ಬಾರಿಸಿದ ಬಿರುಸಿನ ಶತಕ ಹಾಗೂ ಜೇಮಿ ಓವರ್ಟನ್ ಅವರ 97 ರನ್‌ಗಳ ನೆರವಿನಿಂದ ಇಂಗ್ಲೆಂಡ್ ಮೂರನೇ ಟೆಸ್ಟಿನಲ್ಲಿ ನ್ಯೂಜಿಲೆಂಡ್ ವಿರುದ್ಧ 31 ರನ್‌ಗಳ ಮೊದಲ ಇನ್ನಿಂಗ್ಸ್ ಲೀಡ್ ಪಡೆಯಲು ಶಕ್ತವಾಯಿತು.
ನ್ಯೂಜಿಲೆಂಡ್‌ನ್ನು 329 ರನ್‌ಗಳಿಗೆ ಆಲೌಟ್ ಮಾಡಿದ್ದ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸಿನಲ್ಲಿ 55 ರನ್‌ಗಳಿಗೆ 6 ವಿಕೆಟ್ ಕಳಕೊಂಡು ದುಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ಬ್ಯಾರಿಸ್ಟೋವ್ ಮತ್ತು ಓವರ್ಟನ್ 246 ರನ್‌ಗಳ ಜತೆಗಾರಿಕೆ ನಡೆಸಿದರು. ಏಕದಿನ ಶೈಲಿಯಲ್ಲಿ ಆಡಿದ ಬ್ಯಾರಿಸ್ಟೋವ್ ೧೫೭ ಎಸೆತಗಳಿಂದ 162 ರನ್ ಬಾರಿಸಿದರು. ಇಂಗ್ಲೆಂಡ್ 360 ರನ್ ಗಳಿಸಿ ಆಲೌಟಾಯಿತು.
ಎರಡನೇ ಟೆಸ್ಟಿನಲ್ಲಿ ಕೂಡ ಬ್ಯಾರಿಸ್ಟೋವ್ 67 ಎಸೆತಗಳಿಂದ ಶತಕ ಬಾರಿಸಿ ಇಂಗ್ಲೆಂಡ್ ಗೆಲುವು ಸಾಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!