ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ಗೆ ದಕ್ಷಿಣದಲ್ಲಿಯೂ ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಇದೆ. ಅಭಿಮಾನಿಯೊಬ್ಬ ಹೈದರಾಬಾದ್ ಕಡೆ ಬನ್ನಿ ಎಂದು ಕರೆದಿದ್ದಾರೆ. ಅದಕ್ಕೆ ಶಾರುಖ್ ಖಾನ್ ಉತ್ತರಿಸಿದ್ದು, ನನ್ನ ಸ್ನೇಹಿತ ರಾಮ್ ಚರಣ್ ಕರೆದುಕೊಂಡು ಹೋದರೆ ಬಂದೇ ಬರುತ್ತೇನೆ ಎಂದು ಹೇಳಿದ್ದಾರೆ.
ಶಾರುಖ್ ಪಠಾಣ್ ಸಿನಿಮಾ ಪ್ರಮೋಷನ್ಸ್ನಲ್ಲಿ ಬ್ಯುಸಿ ಇದ್ದು, ನಮ್ಮ ಊರಿಗೂ ಬನ್ನಿ ಎಂದು ಹೈದರಾಬಾದ್ ಅಭಿಮಾನಿ ಕರೆದಿದ್ದಾರೆ.